ಅಂತರಾಷ್ಟ್ರೀಯ

ದುಡ್ಡಿದ್ದರೂ ಭಿಕ್ಷುಕರಿಗಿಂತಲೂ ಕಡೆಯಾಗಿ ಜೀವನ ನಡೆಸುತ್ತಿರುವ ಜಿಂಬಾಬ್ವೆ !

Pinterest LinkedIn Tumblr

currency

ಹರಾರೆ: ಈ ದೇಶದಲ್ಲಿರುವವರೆಲ್ಲ ಕೋಟ್ಯಧಿಪತಿಗಳು. ಎಲ್ಲರ ಜೇಬಲ್ಲೂ ನೂರು ಲಕ್ಷ ಕೋಟಿ ದುಡ್ಡಿದೆ. ಆದರೆ ಅದಕ್ಕೆ ಖರೀದಿ ಬಲವೇ ಇಲ್ಲ. ದುಡ್ಡಿದ್ದರೂ ಭಿಕ್ಷುಕರಂತೆ ಕಡೆಯಾಗಿ ಜೀವನ ನಡೆಸಬೇಕಾಗಿದೆ. 64 ರೂಪಾಯಿ ಬೆಲೆ ಬಾಳುವ ಒಂದು ಡಾಲರ್ ಪಡೆಯಲು ಒಂದರ ಮುಂದೆ 15 ಸೊನ್ನೆ ಹಾಕಿ ಕೂಡಿದರೆ ಎಷ್ಟು ಮೊತ್ತ ಸಿಗುತ್ತದೆಯೋ ಅಷ್ಟು ಮೊತ್ತ ತೆರಬೇಕು.

ಹಣದುಬ್ಬರಕ್ಕೆ ಈ ದೇಶ ಕಂಡುಕೊಂಡ ಉತ್ತರವೆಂದರೆ ನೋಟುಗಳ ಮುಂದೆ ಸೊನ್ನೆ ಹಾಕುವುದು. ಬೇರೆ ಬೇರೆ ಯೋಜನೆಗಳಿಗೆ ದುಡ್ಡಿಲ್ಲವೇ ಯೋಚನೆಯನ್ನೇ ಮಾಡಬೇಡಿ ದುಡ್ಡು ಮುದ್ರಿಸೋಣ ಎಂದು ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಘೋಷಿಸಿದರು.

ಅಧ್ಯಕ್ಷರ ಅಪ್ಪಣೆ ಮೇರೆಗೆ ಅಲ್ಲಿನ ರಿಸರ್ವ್ ಬ್ಯಾಂಕ್ ನೋಟು ಮುದ್ರಣದಲ್ಲಿ ನಾನಾ ಐಡಿಯಾ ಮಾಡಿತು. ಭಾರತದಲ್ಲಿ ಒಂದು ಸಾವಿರ ಮುಖಬೆಲೆಯ ನೋಟುಗಳು ಮಾತ್ರ ಇವೆ. ಆದರೆ ಜಿಂಬಾಬ್ವೆಯಲ್ಲಿ ಒಂದರ ಮುಂದೆ ಒಂದು ಸೊನ್ನೆ (ಹತ್ತು) ಹಾಕಿದ ನೋಟುಗಳಿದ್ದವು. ಕ್ರಮೇಣ ಈ ಸೊನ್ನೆಗಳು 15ಕ್ಕೆ ಮುಟ್ಟಿವೆ. ವ್ಯಾಪಾರಸ್ಥರು ಲಕ್ಷ, ಕೋಟಿಗಳನ್ನು ಪೈಸೆಗಿಳಿಸಿಕೊಂಡರು. ನೋಟುಗಳು ಅಸಲಿ ಮೌಲ್ಯ ಕಳೆದುಕೊಂಡು ನಾಮಕೇವಾಸ್ತೆಯಾದವು.

ದೇಶದ ಪ್ರಮುಖ ಅರ್ಥಶಾಸ್ತ್ರಜ್ಞ ಹಾಗೂ ಸೆಂಟ್ರಲ್ ಬ್ಯಾಂಕ್‌ನ ಮಾಜಿ ಗವರ್ನರ್ ಗಿಡೊನ್ ಗೊನೊ

”ನಮ್ಮದು ಜೂಜು ಅರ್ಥಿಕತೆ. ದಿನ ಬೆಳಗಾಗುವುದರೊಳಗೆ ಮಿಲಿಯನೇರ್‌ಗಳು, ಬಿಲಿಯನೇರ್‌ಗಳು ಹಾಗೂ ಟ್ರಿಲಿಯನೇರ್‌ಗಳನ್ನು ಸೃಷ್ಟಿಸುತ್ತಿದ್ದೇವೆ. ಕರೆನ್ಸಿಗೆ ಬಳಸುವ ಕಾಗದದ ಬೆಲೆ ಕೂಡ ಇಲ್ಲ. ಇದಕ್ಕೆ ಕಡಿವಾಣ ಹಾಕಲೇ ಬೇಕು ಇಲ್ಲದಿದ್ದರೆ ಇಡೀ ದೇಶ ನಗೆಪಾಟಲಿಗೀಡಾಗುತ್ತದೆ,”ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈಗ ಜಿಂಬಾಬ್ವೆ ಡಾಲರ್ ಚಲಾವಣೆ ರದ್ದಾಗಿದ್ದರೂ ಹಳೆಯ ನೋಟುಗಳ ಚಲಾವಣೆಗೆ ಅವಕಾಶ ಕಲ್ಪಿಸಿದ್ದು, ಬ್ಯಾಂಕುಗಳ ಮುಂದೆ ದಿನಗಟ್ಟಲೆ ಸರತಿ ನಿಲ್ಲಬೇಕಾಗಿದೆ. ”ದೇಶದ ಆರ್ಥಿಕತೆಗೆ ಬಲ ತುಂಬುವ ಕ್ರಾಂತಿಕಾರಿ ಯೋಜನೆಗಳ ಮೊರೆ ಹೋಗಬೇಕು,” ಎಂದು ಅವರು ಸಲಹೆ ನೀಡಿದ್ದಾರೆ

ದೇಶದ ಪರಿಸ್ಥಿತಿ ದಿವಾಳಿಯಾಗಿದ್ದರೂ ರಾಬರ್ಟ್ ಮುಗಾಬೆ, ಈ ವರ್ಷದಲ್ಲಿ 15ನೇ ಬಾರಿ ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿದ್ದು, ಅಲ್ಲಿ ವಿಶ್ವಸಂಸ್ಥೆ ಆಯೋಜಿಸಿರುವ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

Write A Comment