ಅಂತರಾಷ್ಟ್ರೀಯ

ಭೂಕಂಪದಿಂದ ನಲುಗಿದ ನೇಪಾಳದಲ್ಲಿ ಭೂಕುಸಿತಕ್ಕೆ 41 ಜನ ಸಾವು

Pinterest LinkedIn Tumblr

Nepalad

ಕಠ್ಮಂಡು: ನೇಪಾಳದ ತಪ್ಲೆಜಂಗ್ ಜಿಲ್ಲೆಯಲ್ಲಿ ಭಾರಿ ಮಳೆಯ ಪರಿಣಾಮವಾಗಿ ಭೂಕುಸಿತ ಸಂಭವಿಸಿ ಕನಿಷ್ಠ 41 ಜನ ಮೃತರಾಗಿ ಇತರ 80ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 12 ಮಂದಿ ಕಣ್ಮರೆಯಾಗಿದ್ದಾರೆ.

ಭೂಕುಸಿತದಲ್ಲಿ ಈಶಾನ್ಯ ನೇಪಾಳದ ಪರ್ವತ ಪ್ರದೇಶದಲ್ಲಿ 6 ಗ್ರಾಮಗಳು ಸಮಾಧಿಯಾಗಿವೆ ಎಂದು ವರದಿಗಳು ತಿಳಿಸಿವೆ.

ತಪ್ಲೆಜಂಗ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಜನ ಸಿಹಿ ನಿದ್ದೆಯಲ್ಲಿದ್ದಾಗ ಭೂಕುಸಿತ ಸಂಭವಿಸಿದ್ದು ಈ ಗ್ರಾಮಗಳು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ ಎಂದು ಜಿಲ್ಲೆಯ ಹಂಗಾಮಿ ಮುಖ್ಯಾಧಿಕಾರಿ ಸುರೇಂದ್ರ ಭಟ್ಟಾರೈ ಅವರನ್ನು ಉಲ್ಲೇಖಿಸಿ ‘ಮೈ ರಿಪಬ್ಲಿಕಾ’ ವರದಿ ಮಾಡಿದೆ.

ಗಾಯಾಳುಗಳ ರಕ್ಷಣೆಗಾಗಿ ಹೆಲಿಕಾಪ್ಟರ್​ಗಳನ್ನು ಕಳುಹಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ನುಡಿದರು.

Write A Comment