ಅಂತರಾಷ್ಟ್ರೀಯ

ಬಳಸಿದ ಮೊಬೈಲ್‌ಗಳಲ್ಲಿದೆ 980 ಕೋಟಿ ರೂ. ಚಿನ್ನ!

Pinterest LinkedIn Tumblr

mobile

ಲಂಡನ್: ಬಳಸಿದ ಮೊಬೈಲ್‌ಗಳಿಂದ ಚಿನ್ನ ತೆಗೆಯಬಹುದು ಗೊತ್ತಾ?

ಮೊಬೈಲ್‌ನಲ್ಲಿ ಚಿನ್ನ, ಕಂಚು, ಬೆಳ್ಳಿ ಸೇರಿದಂತೆ ಇತರೆ ಬೆಲೆಯುಳ್ಳ ಲೋಹಗಳನ್ನು ಬಳಸಿರುತ್ತಾರೆ. ಅವನ್ನು ಹೊರ ತೆಗೆದರೆ ಲಾಭವೂ ಇದೆ. ಆದರದು ಸುಲಭವಲ್ಲ. ಇದಕ್ಕೆ ತಗಲುವ ವೆಚ್ಚವೂ ಅಪಾರ. ಪರಿಸರದ ಮೇಲೆ ದುಷ್ಟರಿಣಾಮ ಬೀರುವುದೂ ಹೆಚ್ಚು. ಈ ಕಾರಣಕ್ಕೆ ಸುಮಾರು 100 ಮಿಲಿಯನ್ ಪೌಂಡ್ಸ್ (980 ಕೋಟಿ ರೂ.) ಮೊತ್ತದ ಚಿನ್ನವನ್ನು ಬಳಸಿದ ಮೊಬೈಲ್‌ಗಳಿಂದ ಹೊರ ತೆಗೆಯುವ ಕೆಲಸ ಸಾಧ್ಯವಾಗುತ್ತಿಲ್ಲ.

ಯುಕೆಯ ಸರ್ರಿ ವಿವಿಯ ಡಾ.ಜೇಮ್ಸ್ ಸಕ್ಲಿಂಗ್ ನಡೆಸಿದ ಅಧ್ಯಯನವೊಂದು ಈ ಸತ್ಯವನ್ನು ಬಯಲಿಗೆಳೆದಿದೆ. ನವೀನ ಮಾದರಿ ಫೋನ್‌ಗಳನ್ನು ಬಳಸುವಂತೆ ಪ್ರೇರೇಪಿಸುವ ಕಂಪನಿಗಳು, ಹಳೆಯ ಫೋನುಗಳ ಮರು ಬಳಕೆಗೆ ಒತ್ತು ನೀಡುತ್ತಿಲ್ಲ. ಹೀಗಾಗಿ ಸುಮಾರು 8.5 ಕೋಟಿ ಬಳಸಿದ ಮೊಬೈಲ್‌ಗಳ ರಾಶಿ ಬಿದ್ದಿದೆ.

ರಾಸಾಯನಿಕ ಕ್ರಿಯೆಯ ಮೂಲಕ ಸುಮಾರು 11 ಸಾವಿರ ರೂ.ಮೌಲ್ಯದ ಚಿನ್ನವನ್ನು ತೆಗೆಯಬೇಕಾದರೆ 84 ಸಾವಿರ ಟನ್ ಕಾರ್ಬನ್ ಡೈಆಕ್ಸೈಡ್ ಪರಿಸರಕ್ಕೆ ಸೇರಲಿದೆ. ಅದಕ್ಕೆ ಮೊಬೈಲ್‌ ಕೊಳ್ಳುವಾಗ ಕಂಪನಿಗೆ ಹಿಂದಿರುಗಿಸುವ ಕಾಂಟ್ರ್ಯಾಕ್ಟ್ ಮಾಡಿಕೊಳ್ಳುವಂತೆ ಕಾನೂನಿಗೆ ತಿದ್ದುಪಡಿಯಾಗಲಿ. ಮೊಬೈಲ್ ಫೋನ್‌ಗಳನ್ನು ಉತ್ಪಾದಿಸುವಾಗಲೇ ಅಮೂಲ್ಯ ಲೋಹ ಬಳಸುವ ಬದಲು ಸರಳ ತಂತ್ರಜ್ಞಾನವನ್ನೂ ಬಳಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.

Write A Comment