ರಾಷ್ಟ್ರೀಯ

ಅಯೋಧ್ಯೆಯಲ್ಲಿ ರಾಮ ಮಂದಿರದ ಬದಲು ಹೈಟೆಕ್‌ ಮ್ಯೂಸಿಯಂ ನಿರ್ಮಿಸಲು ಮೋದಿ ಸರಕಾರ ಚಿಂತನೆ

Pinterest LinkedIn Tumblr

rama

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಬದಲು ಹೈಟೆಕ್‌ ಮ್ಯೂಸಿಯಂ ನಿರ್ಮಿಸಲು ನರೇಂದ್ರ ಮೋದಿ ಸರಕಾರ ಚಿಂತನೆ ನಡೆಸಿದೆ.

ಉದ್ದೇಶಿತ ರಾಮಾಯಣ ಪ್ರಚಾರ ಪರ್ಯಟನೆ ಭಾಗವಾಗಿ ಅಯೋಧ್ಯೆಯಲ್ಲಿ ರಾಮನ ವಸ್ತು ಸಂಗ್ರಹಾಲಯ ನಿರ್ಮಿಸಲು ಚಿಂತನೆ ನಡೆದಿದೆ ಎಂದು ಪ್ರವಾಸೋದ್ಯಮ ಸಚಿವ ಮಹೇಶ್‌ ಶರ್ಮ ಹೇಳಿದ್ದಾರೆ.

‘ರಾಮ ಹಾಗೂ ರಾಮಾಯಣದ ಮಹಿಮೆಯನ್ನು ಸಾರುವ ಉದ್ದೇಶದಿಂದ ವಿಶಿಷ್ಟ ಮ್ಯೂಸಿಯಂ ನಿರ್ಮಿಸಲು ಉದ್ದೇಶಿಸಲಾಗಿದೆ. ಮುಂದಿನ ವರ್ಷ ಯೋಜನೆ ಆರಂಭಿಸಲಾಗುವುದು. ಈ ಯೋಜನೆಗೆ ವಿವಾದಿತ ಭೂಮಿಯನ್ನು ಬಳಸಿಕೊಳ್ಳುವುದಿಲ್ಲ,’ ಎಂದು ಶರ್ಮ ಸ್ಪಷ್ಟಪಡಿಸಿದ್ದಾರೆ.

ಬೆಳಕು ಮತ್ತು ಧ್ವನಿ ಸಂಯೋಜನೆಯ ಕಥಾ ರೂಪಕ, ದೋಣಿ ವಿಹಾರ, ಸ್ವಾಮಿ ಕುರಿತ ಚಿತ್ರ ಹಾಗೂ ಸಂಬಂಧಪಟ್ಟ ಪ್ರಾಚ್ಯವಸ್ತು ಸಂಗ್ರಹಾಲಯ ಮುಂತಾದ ವೈಶಿಷ್ಟ್ಯಗಳನ್ನೊಳಗೊಂಡಿರುವ ದಿಲ್ಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇಗುಲದ ಮಾದರಿಯಲ್ಲಿ ಮ್ಯೂಸಿಯಂ ನಿರ್ಮಿಸುವ ಪ್ರಸ್ತಾವನೆ ಇದೆ.

ಅಯೋಧ್ಯೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಮನಿಗೆ ಸಂಬಂಧಿಸಿದ ಎಲ್ಲ ತಾಣಗಳನ್ನು ಅಭಿವೃದ್ಧಿ ಪಡಿಸಿ, ಇಡೀ ಪಟ್ಟಣವನ್ನು ಪ್ರಮುಖ ಸಾಂಸ್ಕೃತಿ ಕೇಂದ್ರವನ್ನಾಗಿ ರೂಪಿಸುವುದು ಸರಕರದ ಉದ್ದೇಶ.

2017ರಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮ್ಯೂಸಿಯಂ ನಿರ್ಮಾಣಕ್ಕೆ ರಾಜಕೀಯ ವಿರೋಧ ಎದುರಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ, ‘ ‘ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ ಇದೆ. ಅಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿಲ್ಲ,’ ಎಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.

Write A Comment