ಅಂತರಾಷ್ಟ್ರೀಯ

‘ಸೂರ್ಯ’ ನನ್ನೇ ಮಾರಾಟ ಮಾಡಲೋರಟ ಮಹಿಳೆ..!

Pinterest LinkedIn Tumblr

1483ebay

ಭೂಮಿ ಮೇಲೆ ಜಾಗ ಸಾಕಾಗುತ್ತಿಲ್ಲವೆಂಬ ಕಾರಣಕ್ಕೂ ಏನೋ ಈ ಮಹಿಳೆ ಸೂರ್ಯನ ಮೇಲೆ ಫ್ಲಾಟ್ ಮಾಡಿ ಮಾರಾಟ ಮಾಡಲು ಹೊರಟಿದ್ದಾಳೆ. ತನ್ನ ಮಾರಾಟದ ಜಾಹೀರಾತನ್ನು ತೆಗೆದು ಹಾಕಿರುವುದಕ್ಕೆ ‘ಇಬೇ’ ಮೇಲೆ ಗರಂ ಆಗಿರುವ ಮಹಿಳೆ ಕೋರ್ಟಿನಲ್ಲಿ ಕೇಸನ್ನೂ ದಾಖಲಿಸಿದ್ದಾಳೆ.

ಸ್ಪೇನಿನ 54 ವರ್ಷದ ಮಾರಿಯಾ ಡುರಾನ್ ಎಂಬ ಮಹಿಳೆ 2010 ರಲ್ಲಿ ‘ಸೂರ್ಯ’ ನನ್ನು ತನ್ನ ಹೆಸರಿಗೆ ನೋಟರಿ ಕಛೇರಿಯಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿದ್ದಳು. ಬಳಿಕ ಆನ್ ಲೈನ್ ಮಾರ್ಕೆಟಿಂಗ್ ಕಂಪನಿ ‘ಇಬೇ’ ಯಲ್ಲಿ ಖಾತೆ ತೆರೆದಿದ್ದ ಆಕೆ ‘ಸೂರ್ಯ’ ನ ಮೇಲಿನ ಜಾಗವನ್ನು ಚದರ ಮೀಟರಿಗೆ ಒಂದು ಯುರೋನಂತೆ ಮಾರಾಟ ಮಾಡುತ್ತಿದ್ದಳು.

ತನ್ನ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡು ಬಂದ ತಕ್ಷಣ ಮಾರಿಯಾ ಡುರಾನ್ ಆರಂಭಿಸಿದ್ದ ಅಕೌಂಟನ್ನೇ ‘ಇಬೇ’ ಬ್ಲಾಕ್ ಮಾಡಿತ್ತು. ಇದರಿಂದ ಗರಂ ಆಗಿರುವ ಮಾರಿಯಾ ಡುರಾನ್, ಸ್ಪೇನಿನ ಸ್ಥಳೀಯ ನ್ಯಾಯಾಲಯದಲ್ಲಿ ‘ಇಬೇ’ ವಿರುದ್ದ ಮೊಕದ್ದಮೆ ದಾಖಲಿಸಿದ್ದು, 75,000 ಪೌಂಡುಗಳನ್ನು ನೀಡಲು ‘ಇಬೇ’ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿದ್ದಾಳೆ.

ನ್ಯಾಯಾಲಯದ ಹೊರಗಡೆ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ‘ಇಬೇ’ ಮುಂದಾದರೂ ಆಕೆ ಸುತರಾಂ ಒಪ್ಪಿಲ್ಲ. ಯಾವುದೇ ಒಂದು ದೇಶ ಗ್ರಹ ಹಾಗೂ ನಕ್ಷತ್ರಗಳ ಮೇಲೆ ಹಕ್ಕು ಸಾಧಿಸುವಂತಿಲ್ಲವೆಂಬ ಅಂತರಾಷ್ಟ್ರೀಯ ಒಪ್ಪಂದವಿದ್ದರೂ ಅದು ದೇಶದ ಕುರಿತಾಗಿದ್ದು ತಾನು ಇದರ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಮಾರಿಯಾ ಡುರಾನ್ ತನ್ನನ್ನು ಸಮರ್ಥಿಸಿಕೊಂಡಿದ್ದಾಳೆ.

Write A Comment