ಅಂತರಾಷ್ಟ್ರೀಯ

ಪೆಸಿಫಿಕ್ ಸಾಗರದ ಮೇಲೆ ಕಾಣಿಸಿಕೊಂಡಿದ್ದ ಹಾರಾಡುವ ತಟ್ಟೆ

Pinterest LinkedIn Tumblr

Flying-saucer

ನ್ಯೂಯಾರ್ಕ್, ಜೂ.9: ನಿನ್ನೆ ಪೆಸಿಫಿಕ್ ಸಾಗರದ ಮೇಲೆ ಕಾಣಿಸಿಕೊಂಡಿದ್ದ ಹಾರಾಡುವ ತಟ್ಟೆ (ಫ್ಲೈಯಿಂಗ್ ಸಾಸರ್) ಅನ್ಯಗ್ರಹ ಜೀವಿಗಳು ಹಾರಿ ಬಿಟ್ಟಿದ್ದಲ್ಲ, ಬದಲಿಗೆ ಅಮೆರಿಕಾದ ಬಾಹ್ಯಕಾಶ ಸಂಶೋಧನಾ ಸಂಸ್ಥೆ `ನಾಸಾ` ಹಾರಿಬಿಟ್ಟಿದ್ದು.

ಹಾರಾಡುವ ತಟ್ಟೆ ಎಂದ ಕೂಡಲೇ ಅನ್ಯಗ್ರಹ ಜೀವಿಗಳು ಈ ತಟ್ಟೆಯಲ್ಲಿ ಕೂತು ಭೂಮಿಗೆ ಬರುತ್ತಾರೆ ಎಂಬ ಭ್ರಮೆ ಜನರಲ್ಲಿದೆ. ಜನರ ಈ ಕಲ್ಪನೆಗೆ ವೈಜ್ಞಾನಿಕ ಕಾದಂಬರಿಗಾರರು ರೆಕ್ಕೆ ಪುಕ್ಕ ತುಂಬಿದ್ದಾರೆ.

ಮಂಗಳಗ್ರಹಕ್ಕೆ ಮುಂದೆ ಮಾನವರನ್ನು ಕಳುಹಿಸುವ ಯೋಚನೆಯಲ್ಲಿರುವ `ನಾಸಾ` ಅಂತಹುದರ ಪರೀಕ್ಷಾರ್ಥವಾಗಿಯೇ ಸಾಸರ್ ಆಕಾರದ ನೌಕೆಯನ್ನು ಹಾರಿಬಿಟ್ಟಿತ್ತು. ಹವಾಯ್ ದ್ವೀಪದಲ್ಲಿರುವ ಅಮೆರಿಕಾ ನೌಕಾಪಡೆಯ ಪೆಸಿಫಿಕ್ ಮಿಸೈಲ್ ರೇಜ್‌ನಿಂದ ಇದನ್ನು ಹಾರಿಬಿಡಲಾಗಿತ್ತು.

ಕೈಕೊಟ್ಟಿತು

ಹಾರುವ ತಟ್ಟೆ ಆಕಾರದ ಬಾಹ್ಯಾಕಾಶ ನೌಕೆಯನ್ನು ಹೊತ್ತ ಬಲೂನ್ ಮೇಲಕ್ಕೆ ಹಾರುತ್ತಿದ್ದಂತೆ, ಉಡಾವಣಾ ನಿಯಂತ್ರಣಾ ಕೋಣೆಯಲ್ಲಿ ಎದ್ದ ಹರ್ಷೋದ್ಗಾರಗಳು ಬಹಳ ಹೊತ್ತು ಇರಲಿಲ್ಲ. ನೌಕೆಯನ್ನು ಬಲೂನ್ ಭೂಮಿಯಿಂದ 120,000 ಅಡಿವರೆಗೆ ಮುಟ್ಟಿಸುವ ತನ್ನ ಕಾರ್ಯ ಮುಗಿಸಿತು.

ಆದರೆ ಅದನ್ನು ಅಲ್ಲಿಂದ ಮುಂದಕ್ಕೆ ಒಯ್ಯಬೇಕಾದ ಪ್ಯಾರಾಚೂಟ್ ಕೈಕೊಟ್ಟಿತು. ನಿಯಂತ್ರಣಾ ಕೊಠಡಿಯ ಕಮಾಂಡ್‌ನಂತೆ ಬಲೂನ್ ಬಿಚ್ಚಿಕೊಂಡಿತಾದರೂ ಅದು ಉಬ್ಬಬೇಕಾದ ರೀತಿಯಲ್ಲಿ ಉಬ್ಬಲಿಲ್ಲ. ಅತಿವೇಗದಲ್ಲಿ ಸಾಗುವ ನೌಕೆಯನ್ನು ಮಂಗಳನ ಪರಿಧಿಯ ಮೇಲೆ ನಿಧಾನವಾಗಿ ಇಳಿಸುವಲ್ಲಿ ಈ ಪ್ಯಾರಾಚೂಟ್ ಪ್ರಮುಖ ಪಾತ್ರ ವಹಿಸುತ್ತದೆ.

Write A Comment