ಅಂತರಾಷ್ಟ್ರೀಯ

ಮಹಿಳೆಯರಿಗೂ ಬಂತು ವಯಾಗ್ರ !!

Pinterest LinkedIn Tumblr

Flibanserin

ಇಷ್ಟು ದಿನ ಪುರುಷರು ಮಾತ್ರ ಉಪಯೋಗಿಸುತ್ತಿದ್ದ ವಯಾಗ್ರಕ್ಕೆ ಪ್ರತಿಯಾಗಿ ಅಮೆರಿಕಾ ಆಹಾರ ಮತ್ತು ಡ್ರಗ್ ನಿರ್ವಹಣಾ ಸಮಿತಿ ಇದೀಗ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಉದ್ರೇಕಿಸುವ ಮೊದಲ ಔಷಧಾ ತಯಾರಿಕೆಗೆ ಮುಂದಾಗಿದ್ದು ಸದ್ಯದಲ್ಲಿಯೇ ಈ ‘ವಯಾಗ್ರ’ ಮಹಿಳೆಯರಿಗೆ ಲಭಿಸಲಿದೆ.

ಪುರುಷರಲ್ಲಿ ಉದ್ರೇಕ ದೌರ್ಬಲ್ಯಕ್ಕೆ ಬಳಸುವ ವಯಾಗ್ರದ ಸ್ವರೂಪದಲ್ಲಿಯೇ ಈ  ‘ಫ್ಲಿಬಾನ್ ಸೆರಿನ್’ ಎಂಬ ಔಷಧ ಇರಲಿದ್ದು ಈಗಾಗಲೇ ಸಲಹಾ ಸಮಿತಿ ಇದಕ್ಕೆ ಅಂಗೀಕಾರ ನೀಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.

ಲೈಂಗಿಕ ಆಸಕ್ತಿಯ ದೌರ್ಬಲ್ಯದಿಂದ ನರಳುತ್ತಿರುವ ಮಹಿಳೆಯರಿಗೆ ಮುಟ್ಟು ತೀರಿಕೆಗೂ ಪೂರ್ವದಲ್ಲಿ  ಮಲಗುವ  ವೇಳೆಯಲ್ಲೂ ದಿನಕ್ಕೊಮ್ಮೆ ತೆಗೆದುಕೊಳ್ಳಬಹುದಾದ ಈ ಕಂದು ಮಾತ್ರೆಯು ಲೈಂಗಿಕ ಉತ್ತೇಜನವನ್ನು ನೀಡಲಿದ್ದು ಇದನ್ನು ಮುಟ್ಟುತೀರಿಕೆಯ ಪೂರ್ವದಲ್ಲಿ  ಲೈಂಗಿಕ ದೌರ್ಬಲ್ಯ ಕಂಡು ಬಂದಿರುವ ಮಹಿಳೆಯರು ಉಪಯೋಗಿಸಬಹುದಾಗಿದೆಯಂತೆ.

ಇದರ ಪ್ರಯೋಗದ ವೇಳೆ ಮಹಿಳೆಯರಿಗೆ ಈ ಮಾತ್ರೆ ಉಪಯೋಗವಾಗಿದ್ದರೂ ಕಡಿಮೆ ರಕ್ತದೊತ್ತಡ, ತಲೆಸುತ್ತುವುದು ಕಂಡುಬಂದಿದ್ದು ಈ ನಡುವೆ ಲೈಂಗಿಕ ಸಮಾನತೆಗೆ ಇದು ಒಳ್ಳೆಯ ನಡೆ ಎಂದು ಕೆಲವು ಮಹಿಳಾ ಸಂಘಟನೆಗಳು ಇದನ್ನು ಸ್ವಾಗತಿಸಿವೆ.

Write A Comment