ಅಂತರಾಷ್ಟ್ರೀಯ

10 ದುಬಾರಿ ಕಾರ್ ಖರೀದಿಸಿದ ಶತಮಾನದ ಬಾಕ್ಸಿಂಗ್ ವೀರ

Pinterest LinkedIn Tumblr

Mevbedarrr

ಅಮೆರಿಕ, ಜೂ.5: ಶತಮಾನದ ಬಾಕ್ಸಿಂಗ್ ಪಟು ಎಂಬ ಖ್ಯಾತಿಗೆ ಪಾತ್ರರಾಗಿರುವ ಎಫ್‌ಎಂ ಮೇ ವೆದರ್ ಇದೀಗ ವಿಶ್ವದಲ್ಲೇ ಅತ್ಯಂತ ದುಬಾರಿ ಕಾರು ಹೊಂದಿರುವ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಲಾಸ್‌ವೆಗಾಸ್‌ನಲ್ಲಿ ನಡೆದ ಶತಮಾನದ ಬಾಕ್ಸಿಂಗ್ ಪಂದ್ಯದಲ್ಲಿ ಎದುರಾಳಿಗೆ ಮಣ್ಣು ಮುಕ್ಕಿಸಿ 120 ಮಿಲಿಯನ್ ಪೌಂಡ್ ಮೊತ್ತವನ್ನು ಕಿಸೆಗೆ ಇಳಿಸಿಕೊಂಡಿದ್ದ ಮೈಮಿ ಇದೀಗ 4.6 ಮಿಲಿಯನ್ ಪೌಂಡ್ ಮೊತ್ತದ ವಿಶ್ವದ ಅತ್ಯಂತ ದುಬಾರಿ 10 ಕಾರ್‌ಗಳನ್ನು ಖರೀದಿಸಿದ್ದಾನೆ.

ನಿರೀಕ್ಷೆಗಿಂತ ಹೆಚ್ಚು ಹಣ ಹರಿದು ಬಂದರೆ ನೆಮ್ಮದಿಗಿಂತ ಹಣ ಖರ್ಚು ಮಾಡುವುದೇ ದೊಡ್ಡ ತಲೆನೋವು. ಇಂತಹ ತಲೆನೋವಿನಿಂದ ಬಚಾವಾಗುವ ಉದ್ದೇಶದಿಂದ ಮೈಮಿ ಎರಡು ರೋಲ್ಸ್‌ರಾಯ್ಸ್ , 1 ಮರ್ಸಿಡಿಸ್ ಮೆಬ್ಯಾಕ್ , ಮರ್ಸಿಡಿಸ್ ಜಿ-63, ಎಎಂಜಿ ವಿ8 ಬಿಟರ್ಬೊ , ಅವೆಂಟೆಂಡರ್ ಹೆಲ್ಪಿ ಮತ್ತಿತರ ದುಬಾರಿ ಕಾರುಗಳನ್ನು ಖರೀದಿಸಿದ್ದಾನೆ. ಕೈ ತುಂಬಾ ಹಣ ಬಂದ ಕೂಡಲೇ ಶಾಪಿಂಗ್ ಮಾಡಲು ಮುಂದಾದ ಮೈಮಿ ವಿಶ್ವದ ಅತ್ಯಂತ 100 ಕಾರುಗಳನ್ನು ಪರಿಶೀಲಿಸಿ ಅವುಗಳಲ್ಲಿ 4.6 ಮಿಲಿಯನ್ ಪೌಂಡ್ ಮೌಲ್ಯದ 10 ಕಾರುಗಳನ್ನು ಖರೀದಿ ಮಾಡಿದ್ದಾನೆ ಎಂದು ಅಮೆರಿಕದ ಡೈಲಿಮೈಲ್ ಪತ್ರಿಕೆ ವರದಿ ಮಾಡಿದೆ. ಖರೀದಿಸಿರುವ 10 ಕಾರುಗಳು ಬಿಳಿ ಬಣ್ಣದಾಗಿರುವುದು ಮೈಮಿಯ ಮತ್ತೊಂದು ವಿಶೇಷವಾಗಿದೆ.

Write A Comment