ಅಂತರಾಷ್ಟ್ರೀಯ

48 ಮದರಸಾಗಳ ವಿರುದ್ಧ ಕ್ರಮಕ್ಕೆ ಮುಂದಾದ ಪಾಕ್ ಸರ್ಕಾರ

Pinterest LinkedIn Tumblr

Madarasa-in-Pakistan

ಕರಾಚಿ: ಪಾಕಿಸ್ತಾನದಲ್ಲಿ ಭಯೋತ್ಪಾದನ ಚಟುವಟಿಕೆಗಳು ಹೆಚ್ಚುತ್ತಿದ್ದು, ಭಯೋತ್ಪಾದಕತೆಗೆ ಪ್ರೋತ್ಸಾಹ ನೀಡುತ್ತಿದ್ದ 48 ಮದರಸಾಗಳ ವಿರುದ್ದ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನ ಸಿಂಧ್ ಪ್ರಾಂತ್ಯದ ಸರ್ಕಾರ ಮುಂದಾಗಿದೆ.

ಭಯೋತ್ಪಾದಕರ ಮಟ್ಟ ಹಾಕುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಖಯಾಮ್ ಅಲಿಷಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ವಾರ್ತಾ ಸಚಿವ ಶರ್ಜಿಲ್ ಇನಾಮ್ ಮೆಮೋನ್, ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ಹಾಗೂ ನೆರವು ನೀಡುವಲ್ಲಿ ನಿರತವಾಗಿರುವ 48 ಮದರಸಾಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮದರಸಾಗಳ ಹಣದ ಮೂಲ ಮತ್ತು ಅವರ ಚಲನವಲನಗಳನ್ನು ಗಮನಿಸಲು ಕ್ರಿಯಾ ಪಡೆಗಳನ್ನು ರಚಿಸಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.

Write A Comment