ಅಂತರಾಷ್ಟ್ರೀಯ

ಇಲ್ಲಿ ‘ಗಂಡ’ಸರು ಬಾಡಿಗೆಗೆ ಬೇಕಾಗಿದ್ದಾರೆ !!

Pinterest LinkedIn Tumblr

3354abc_shawn_escort_service_jp_120216_wmain

ಪುರುಷರು ಪತ್ನಿ ಸಹವಾಸ ಸಾಕಾಗದೇ ಪರಸ್ತ್ರೀಯರ ತೆಕ್ಕೆಗೆ ಬೀಳುವ ಬಗೆಗೆ ಕೇಳಿದ್ದೀರಿ. ಇನ್ನು ಕೆಲವರು ಪರ ಪುರುಷನ ಜತೆ ಓಡಿ ಹೋದ ಘಟನೆಗಳನ್ನೂ ನೋಡಿದ್ದೀರಿ.ಆದರೆ ಮಹಿಳೆಯರು ತಮ್ಮ ಆಸೆ ಪೂರೈಸಿಕೊಳ್ಳಲು ಗಂಡಸರನ್ನು ಬಾಡಿಗೆಗೆ ಪಡೆಯುತ್ತಿರುವ ಕುತೂಹಲಕಾರಿ ಅಂಶವೊಂದು ಲಂಡನ್ ನಲ್ಲಿ ಕೇಳಿ ಬಂದಿದೆ.

ಹೌದು. ಇಲ್ಲಿನ ಮಹಿಳೆಯರಿಗೆ ತಮ್ಮ ಕೆಲಸದ ನಡುವೆ ಸಂಸಾರದ ಬಗೆಗೆ ಗಮನ ನೀಡಲು ಸಾಧ್ಯವಾಗುತ್ತಿಲ್ಲವಂತೆ. ಹಾಗಾಗಿ ತಮ್ಮ ಕಾಮನೆ ಪೂರೈಸಿಕೊಳ್ಳಲು ಗಂಡಸರಿಗೆ ಹಣ ನೀಡಿ ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಅಷ್ಟೇ ಅಲ್ಲ, ಕೆಲವರು ರೋಮ್ಯಾನ್ಸ್’ಗಷ್ಟೇ ಸೀಮಿತಗೊಳಿಸಿ ಪುರುಷರನ್ನು ಬಾಡಿಗೆ ಪಡೆಯುವವರೂ ಇದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು ಕಳೆದ ಐದು ವರ್ಷಗಳಿಂದ  ಬ್ರಿಟನ್’ನಲ್ಲಿ ಈ ಪದ್ಧತಿ ನಡೆಯುತ್ತಿದ್ದು  ವರ್ಷದಲ್ಲಿ ಬಾಡಿಗೆ ಪುರುಷರನ್ನು ನೇಮಿಸಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ 11,056 ರಿಂದ 28,614 ದಾಟಿದೆಯಂತೆ. ಒಟ್ಟಿನಲ್ಲಿ ಹೆಣ್ಣಿನ ಹಿಂದೆ ಓಡುತ್ತಿದ್ದ ಪುರುಷರಿಗೆ ಕಾಸಿನ ಜತೆಗೆ ಸುಖ ಸಿಗುತ್ತಿರುವುದ್ದಂತೂ ಸತ್ಯ.

Write A Comment