ಅಂತರಾಷ್ಟ್ರೀಯ

ವಿಶ್ವದ ಮೊದಲ ಕೊಲೆ ನಡೆದಿದ್ದು 4,30,000 ವರ್ಷಗಳ ಹಿಂದೆ!

Pinterest LinkedIn Tumblr

skull

ಮ್ಯಾಂಡ್ರಿಡ್: ಜಗತ್ತಿನಲ್ಲಿ ಮೊದಲ ಬಾರಿ ಹತ್ಯೆ ನಡೆದಿದ್ದು 4,30,000 ವರ್ಷಗಳ ಹಿಂದೆ ಎಂಬುದನ್ನು ತಜ್ಞರು ಸಾಬೀತು ಪಡಿಸಿದ್ದಾರೆ. 28 ಜನರನ್ನು ಯಾರೋ ಕೊಲೆ ಮಾಡಿ ಎಸೆದಿದ್ದರು. ಹತ್ಯೆಗೊಳಗಾದವರ ಅವಶೇಷಗಳು ಮತ್ತು ಕೊಲೆಯ ಸಾಕ್ಷ್ಯಾಧಾರಗಳು ಸ್ಪೇನ್ ನಲ್ಲಿ  ಪತ್ತೆಯಾಗಿದ್ದು, ಇದರೊಂದಿಗೆ ಪುರಾತನ ಶವ ಸಂಸ್ಕಾರ ರೀತಿಗಳ ಬಗ್ಗೆಯೂ ಮಾಹಿತಿ ಲಭಿಸಿದೆ.

ಬಿಂಗ್ ಹ್ಯಾಂಟನ್ ವಿಶ್ವ ವಿದ್ಯಾಲಯದಲ್ಲಿನ  ಪಳೆಯುಳಿಕೆ ಶಾಸ್ತ್ರಜ್ಞ ರೋಲ್ಫ್ ಕ್ವಾಮ್ ನೇತೃತ್ವದ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಉತ್ತರ ಸ್ಪೇನ್‌ನಲ್ಲಿ ಸಂಶೋಧನೆ ನಡೆಸಿತ್ತು.

ಭೂಮಿಯ ಅಡಿಯಲ್ಲಿ ಗುಹೆಯಂತಿರುವ ಒಂದು ಹೊಂಡದಲ್ಲಿ 4,30,000 ವರ್ಷ ಹಳೆಯದಾಗಿರುವ 28 ಜನರ ಅವಶೇಷಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದು ಮಧ್ಯ ಶಿಲಾಯುಗ ಕಾಲದ ಅಸ್ಥಿಗಳು ಎಂಬ ಸಂದೇಹವಿದೆ. 13 ಮೀಟರ್ ಮಾತ್ರ ಆಳವಿರುವ ವಿಶೇಷ ರೀತಿಯಲ್ಲಿ ವಾಲಿಕೊಂಡಿರುವ ಹೊಂಡವೊಂದರಲ್ಲಿ ಮೃತದೇಹಗಳನ್ನು ಹೇಗೆ ಇಡಲಾಯಿತು ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ಕೆಲವು ಬುರುಡೆಗಳು ಯಥಾಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಇನ್ನು ಕೆಲವು ಬುರುಡೆಯ ಮೇಲೆ ಕಣ್ಣು, ನಡು ನೆತ್ತಿಯ ಮೇಲೆ ಗಾಯಗಳ ಗುರುತು ಇದೆ. ಒಂದೇ ಆಯುಧದಿಂದ ಎರಡು ಬಾರಿ ಆಕ್ರಮಣಕ್ಕೊಳಪಟ್ಟವುಗಳಾಗಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಮೃತದೇಹಗಳನ್ನು ಈ ಸ್ಥಳಕ್ಕೆ ಒಯ್ದಿರುವುದು ಕೂಡಾ ಮನುಷ್ಯರೇ. ಗುಹೆಯ ಬಳಿ ಮೃತದೇಹಗಳನ್ನು ಎಳೆದೊಯ್ದು ಅಲ್ಲಿಂದ ದೂಡಿ ಹಾಕಿದ್ದಾಗಿರಬಹುದು. ಈಗಿನ ಸ್ಮಶಾನಗಳಂತೆ ಆಗಿನ ಕಾಲದಲ್ಲೂ  ನಿರ್ದಿಷ್ಟ ಸ್ಥಳಗಳಲ್ಲಿ ಮನುಷ್ಯರ  ಮೃತದೇಹಗಳನ್ನು ಸಂಸ್ಕಾರ ಮಾಡುತ್ತಿದ್ದರು ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

Write A Comment