ಕರಾಚಿ,ಮೇ 29- ಪಾಕಿಸ್ತಾನದ ಮೊದಲ ಪರಮಾಣು ಪರೀಕ್ಷೆಯನ್ನು ಹಾಳು ಮಾಡುವ ಉದ್ದೇಶದಿಂದ 1998ರಲ್ಲಿ ವಿಮಾನ ಅಪಹರಿಸಿ ಭಾರತಕ್ಕೆ ಹೋಗಲು ಯತ್ನಿಸಿದ ಆರೋಪ ಎದುರಿಸುತ್ತಿದ್ದ ಮೂವರನ್ನು ಪಾಕ್ ಸರ್ಕಾರ ಗುರುವಾರ ಗಲ್ಲಿಗೇರಿಸಿದೆ. ಪರಮಾಣು ಪರೀಕ್ಷೆಯ 17ನೇ ವಾರ್ಷಿಕೋತ್ಸವದ ದಿನದಂದೇ ಈ ಮೂವರನ್ನು ನೇಣು ಶಿಕ್ಷೆಗೆ ಗುರಿಪಡಿಸಲಾಗಿದೆ.
ಮೂವರ ಪೈಕಿ ಶಾಶ್ವಾರ್ ಬಲೋಚ್ ಮತ್ತು ಶಬ್ಬೀರ್ ಬಲೋಚ್ ಇಬ್ಬರನ್ನು ಹೈದರಾಬಾದ್(ಪಾಕ್)ನಲ್ಲಿ ಗಲ್ಲುಗಂಬ ಏರಿಸಿದರೆ, ಶಬ್ಬೀರ್ ರಿಂಡ್ ಎಂಬುವನನ್ನು ಕರಾಚಿಯ ಕಾರಾಗೃಹದಲ್ಲಿಯೇ ಗಲ್ಲಿ ಗೇರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂವರು 1998ರ ಮೇ 24ರಂದು ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನ ವಿಮಾನವನ್ನು 30 ಪ್ರಯಾಣಿಕರ ಸಹಿತ ಅಪಹರಿಸಿದ್ದರು.