ಅಂತರಾಷ್ಟ್ರೀಯ

ಗರ್ಭ ನಿರೋಧಕ ಮಾತ್ರೆ ಕೆಲವೊಮ್ಮೆ ಮಾರಣಾಂತಿಕವಾಗಬಹುದು; ಮಾತ್ರೆ ಸೇವಿಸಿ ಸಾವನ್ನಪ್ಪಿದ ಯುವತಿ

Pinterest LinkedIn Tumblr

birthcontrolpills

ಲಂಡನ್: ಗರ್ಭ ನಿರೋಧಕ ಮಾತ್ರೆ ಕೆಲವೊಮ್ಮೆ ಮಾರಣಾಂತಿಕವಾಗಿ ಪರಿಣಮಿಸಿಬಿಡುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 21 ವರ್ಷದ ಇಂಗ್ಲೆಂಡ್‍ನ ಯುವತಿ ಗರ್ಭನಿರೋಧಕ ಮಾತ್ರೆಯನ್ನು ಸೇವಿಸಿದ ಪರಿಣಾಮ ಇದೀಗ ಸಾವನ್ನಪ್ಪಿದ್ದಾಳೆ.

ಆರೋಗ್ಯವಂತಳಾಗಿದ್ದ ಫಾಲೆನ್ ಕ್ಯೂರೆಕ್ ಗರ್ಭನಿರೋಧಕ ಮಾತ್ರೆಯನ್ನು ತೆಗೆದುಕೊಂಡ 25 ದಿನಗಳ ನಂತರ ಅನಾರೋಗ್ಯಕ್ಕೆ ಈಡಾಗಿದ್ದಳು.ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿ, ಮಿದುಳಿಗೆ ಆಮ್ಲಜನಕ ಪ್ರಸಾರವಾಗುವುದುನಿಂತು ಹೋಗಿತ್ತು. ಪರಿಣಾಮ ಮಿದುಳು ನಿಷ್ಕ್ರೀಯಗೊಂಡು, ದೇಹದಲ್ಲಿ ರಕ್ತ ಹೆಪ್ಪುಗಟ್ಟಿ ಜೀವನ್ಮರಣ ಹೋರಾಟದ ನಡೆಸಿದ ಬಳಿಕ ಸಾವನ್ನಪ್ಪಿದ್ದಾಳೆ.

ಕೆಲವೊಮ್ಮೆ ಗರ್ಭನಿರೋಧಕ ಮಾತ್ರೆ ಅತೀ ಕೆಟ್ಟ ಪರಿಣಾಮ ಬೀರುವುದಲ್ಲೇ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟಿ ಮಾರಣಾಂತಿಕವೂ ಆಗಬಹುದಾದ ಸಾಧ್ಯತೆಗಳು ಹೆಚ್ಚಿರುತ್ತದೆ ಎಂದು ಹಲವು ವೈದ್ಯರು ಹೇಳಿದ್ದಾರೆ.

Write A Comment