ಅಂತರಾಷ್ಟ್ರೀಯ

ಐಸ್ ಬಕೆಟ್‌ ಚಾಲೆಂಜ್‌ ನಂತರ ಫೈರ್‌ ಚಾಲೆಂಜ್‌ !

Pinterest LinkedIn Tumblr

3063kids-participating-fire-challengeವಿಶ್ವದಲ್ಲಿ ಭಾರೀ ಸುದ್ದಿ ಮಾಡಿದ್ದ ಐಸ್ ಬಕೆಟ್‌ ಚಾಲೆಂಜ್‌ ನಂತರ  ಇದೀಗ ‘ಫೈರ್‌ ಚಾಲೆಂಜ್‌’ ಹವಾ ಪ್ರಾರಂಭವಾಗಿದ್ದು ಪೋಷಕರ ನಿದ್ದೆಗೆಡಿಸಿದೆ.

ಫೇಸ್‌ಬುಕ್‌ನಲ್ಲಿ ‘ಫೈರ್‌ ಚಾಲೆಂಜ್‌’ ವಿಡಿಯೋ ಹೆಚ್ಚು ಜನಪ್ರಿಯವಾಗಿದ್ದು, ಮೈಮೇಲೆ ಮೇಲೆ ಪೆಟ್ರೋಲ್‌ ಅಥವಾ ಡೀಸೆಲ್‌ ಸುರಿದುಕೊಂಡು ಕಡ್ಡಿ ಗೀರಿದ ನಂತರ ಬೆಂಕಿ ಇಡೀ ದೇಹ ಆವರಿಸುವ ಮೊದಲು ಈಜು ಕೊಳಕ್ಕೆ ಧುಮುಕುವುದೇ ಫೈರ್‌ ಚಾಲೆಂಜ್‌. ಈಗಾಗಲೇ ಈ ಚಾಲೆಂಜ್‌ ತೆಗೆದುಕೊಂಡಿರುವ ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಕುರಿತು ವರದಿಗಳು ಬರುತ್ತಿದ್ದು  ಈ ಆನ್‌ಲೈನ್‌ ವಿಡಿಯೋ ಕ್ರೇಜ್‌ನಿಂದ ಬೆಂಕಿ ಹಚ್ಚಿಕೊಂಡು ಗಂಭೀರವಾಗಿ ಗಾಯಗೊಂಡಿರುವ ಮಕ್ಕಳ ಪೋಷಕರು, ಇಂಥ ಅಪಾಯಕಾರಿ ವಿಡಿಯೋಗಳನ್ನು ಇಂಟರ್ನೆಟ್‌ನಿಂದ ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.

ಅಲ್ಲದೇ ಈ ಚಾಲೆಂಜ್ ಮಾಡಲು ಹೋಗಿ ಹುಡುಗರು ಬೆಂಕಿ ಹಚ್ಚಿಕೊಂಡಿದ್ದ ಚಿತ್ರಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಫೇಸ್‌ಬುಕ್‌ ಹಾಗೂ ಯೂಟ್ಯೂಬ್‌ನಲ್ಲಿ ಇಂಥ ವಿಡಿಯೋಗಳು ಹೆಚ್ಚಿನ ಪ್ರಚಾರ ಗಿಟ್ಟಿಸಿವೆ.

Write A Comment