ಅಂತರಾಷ್ಟ್ರೀಯ

ಮಕ್ಕಳು ಅವಳಿಯಾಗಿದ್ರೂ ಅಪ್ಪಂದಿರು ಇಬ್ಬರು; ಅಮೆರಿಕದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ಬಹಿರಂಗ

Pinterest LinkedIn Tumblr

twins

ನ್ಯೂಯಾರ್ಕ್: ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಅಪ್ಪ ಬೇರೆ ಬೇರೆಯಾಗಿದ್ದರೆ ಅದರಲ್ಲೇನು ವಿಶೇಷವಿಲ್ಲ ಬಿಡಿ. ಆದರೆ, ಮಕ್ಕಳು ಅವಳಿಯಾಗಿದ್ರೂ ಅಪ್ಪಂದಿರು ಇಬ್ಬರಾಗಿದ್ರೆ! ವಿಚಿತ್ರವೇ ಸರಿ. ಹೌದು, ಅಮೆರಿಕದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ಸಾಕಷ್ಟು ಸುದ್ದಿ ಮಾಡಿದೆ. ಪಿತೃತ್ವಕ್ಕೆ ಸಂಬಂಧಿಸಿ ಮಹಿಳೆಯೊಬ್ಬರು ಹಾಕಿದ್ದ ದಾವೆ ವಿಚಾರಣೆ ವೇಳೆ ಈ ಅಚ್ಚರಿಯ ವಿಚಾರ ಬಹಿರಂಗಗೊಂಡಿದ್ದು, ಇದರಿಂದ ನ್ಯಾಯಾಲಯ ಕೂಡ ಐತಿಹಾಸಿಕ ತೀರ್ಪು ನೀಡುವಂತೆ ಮಾಡಿದೆ.

ಆಗಿದ್ದೇನು?
ನ್ಯೂಜೆರ್ಸಿಯ ಮಹಿಳೆಯೊಬ್ಬಳು ಜನವರಿ, 2013ರಂದು ಹುಟ್ಟಿದ ತನ್ನ ಅವಳಿ ಮಕ್ಕಳಿಗೆ ಆತ್ಮೀಯ ಒಡನಾಡಿಯೇ ತಂದೆ. ಹಾಗಾಗಿ ಆ ಮಕ್ಕಳ ಪಾಲನಾ ವೆಚ್ಚವನ್ನು ಆತನೇ ಪಾವತಿಸಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಳು. ಆದರೆ, ನಂತರ ನಡೆದ ವಿಚಾರಣೆ ವೇಳೆ ತಾನು ಆತನ ಜತೆಗೆ ದೈಹಿಕ ಸಂಬಂಧ ಹೊಂದಿದ ವಾರದೊಳಗೆ ಇನ್ನೊಬ್ಬ ಅಪರಿಚಿತ ವ್ಯಕ್ತಿಯ ಜತೆಗೂ ದೇಹ ಹಂಚಿಕೊಂಡಿದ್ದ ರಹಸ್ಯ ಬಾಯ್ಬಿಟ್ಟಿದ್ದಳು. ಇದರಿಂದ ನ್ಯಾಯಾಲಯದ ಆದೇಶದಂತೆ ಮಕ್ಕಳ ಡಿಎನ್‍ಎ ಪರೀಕ್ಷೆ ನಡೆಸಲಾಯಿತು. ಆದರೆ, ಈ ಪರೀಕ್ಷೆ ವರದಿ ನೋಡಿ ಸ್ವತಃ ನ್ಯಾಶರಿಗೇ ಅಚ್ಚರಿ. ಯಾಕೆಂದರೆ ಮಕ್ಕಳ ತಂದೆ ಒಬ್ಬರಲ್ಲ. ಮಕ್ಕಳು ಅವಳಿಯಾ ದರೂ ಅಪ್ಪಂದಿರುಮಾತ್ರ ಬೇರೆ ಬೇರೆ ಎಂದು ಡಿಎನ್‍ಎ ಪರೀಕ್ಷೆ ಹೇಳಿತ್ತು. ಹಾಗಾಗಿ ಪಸಾಯಿಕ್ ಕೌಂಟಿ ನ್ಯಾಯಧೀಶರು ಅವಳಿ ಮಕ್ಕಳಲ್ಲಿ ಒಂದು ಮಗುವಿನ ಪಾಲನೆ ಖರ್ಚನ್ನಷ್ಟೇ ಪಾವತಿಸುವಂತೆ ಮಹಿಳೆಯ ಒಡನಾಡಿಗೆ ಸೂಚಿಸಿ ತೀರ್ಪು ನೀಡಬೇಕಾಯಿತು. ಇದೊಂದು ಐತಿಹಾಸಿಕ ತೀರ್ಪು ಎಂದು ಕಾನೂನಿಗೆ ಸಂಬಂಧಿಸಿದ ಪತ್ರಿಕೆಯೊಂದು ಹೇಳಿದೆ.

ಯಾಕೆ ಹೀಗಾಗುತ್ತೆ?
ಇದು ಅಪರೂಪದಲ್ಲಿ ಅಪರೂಪದ ಪ್ರಕರಣ. ಆದರೆ, ಇಂಥ ಪ್ರಕರಣಗಳು ಈಗೀಗ ಹೆಚ್ಚುತ್ತಿವೆ ಎನ್ನುತ್ತಾರೆ ವೈದ್ಯರು. ವೈದ್ಯಕೀಯ ಪುಸ್ತಕಗಳಲ್ಲಿ ಈ ರೀತಿಯ ಅವಳಿ ಮಕ್ಕಳನ್ನು ಬ್ಲಾಕ್‍ಬೇಬಿ ಮತ್ತು ವೈಟ್ ಬೇಬಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ವೀರ್ಯ ಸಂಭೋಗದ ಐದು ದಿನಗಳ ನಂತರವೂ ಮಹಿಳೆಯರ ಯೋನಿಯಲ್ಲಿ ಜೀವಂತವಾಗಿರುತ್ತದೆ. ಈ ವೇಳೆ ಅದು ಸಂಭೋಗ ಮಾಡಿದ ದಿನ ಅಲ್ಲದಿದ್ದರೂ ಮುಂದಿನ ನಾಲ್ಕು ದಿನಗಳಲ್ಲಿ ಮಹಿಳೆಯರ ಅಂಡಾಣುವಿನೊಂದಿಗೆ ಸೇರಿಕೊಂಡು ಭ್ರೂಣವಾಗಬಹುದು. ಈ ಪ್ರಕರಣದಲ್ಲಿ ಮಹಿಳೆವಾರದೊಳಗೆ ಇಬ್ಬರು ಪುರುಷರೊಂದಿಗೆ ಸಂಭೋಗ ಕ್ರಿಯೆ ನಡೆಸಿದ್ದಾಳೆ. ಆಗ ಇಬ್ಬರೂ ಪುರುಷರ ವೀರ್ಯಾಣು ಪ್ರತ್ಯೇಕ ಅಂಡಾಣುವಿನೊಂದಿಗೆ ಕೂಡಿಕೊಂಡು ಅವಳಿ ಭ್ರೂಣ ಸೃಷ್ಟಿಯಾಗಿದೆ.

Write A Comment