ಅಂತರಾಷ್ಟ್ರೀಯ

ಹಿಂದೂ ಧಾರ್ಮಿಕ ಸಂಕೇತಗಳ ನಿಷೇಧಕ್ಕೆ ಅಮೆರಿಕ ವಿವಿ ಸಜ್ಜು

Pinterest LinkedIn Tumblr

Swastika1

ವಾಷಿಂಗ್ಟನ್, ಎ.24: ಅಮೆರಿಕದ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯವು ತನ್ನ ಆವರಣದಲ್ಲಿರುವ ಹಿಂದೂ ಧಾರ್ಮಿಕ ಸಂಕೇತವನ್ನು ನಿಷೇಸಲು ತಯಾರಿ ನಡೆಸಿರುವುದಾಗಿ ವರದಿಯಾಗಿದೆ.ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಹತ್ವದ ಹಿಂದೂ ಧಾರ್ಮಿಕ ಸಂಕೇತವಾಗಿರುವ ‘ಸ್ವಸ್ತಿಕ’ವು ನಾಝಿ ಸಂಕೇತವನ್ನು ಹೋಲುತ್ತದೆ ಎಂಬ ಕಾರಣವನ್ನು ವಿಶ್ವವಿದ್ಯಾನಿಲಯ ಮುಂದಿಟ್ಟು ಈ ಕ್ರಮ ಕೈಗೊಂಡಿದೆ ಎಂದು ಮಾಧ್ಯಮ ವರದಿಯೊಂದುಶುಕ್ರವಾರ ತಿಳಿಸಿದೆ.

ವಿಶ್ವವಿದ್ಯಾನಿಲಯದಲ್ಲಿ ಉಂಟಾಗಿರುವ ಈ ಬೆಳವಣಿಗೆಯು ಕೆಲವು ವಿದ್ಯಾರ್ಥಿಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡಲಿದೆ ಎಂದು ವರದಿ ತಿಳಿಸಿದೆ. ಈ ವಿಚಾರಕ್ಕೆ ಸಂಬಂಸಿ ವಿದ್ಯಾರ್ಥಿ ಹಕ್ಕುಗಳು ಹಾಗೂ ಹೊಣೆಗಾರಿಕೆ ಕಚೇರಿಯ ನಿರ್ದೇಶಕ ಹಾಗೂ ವಿದ್ಯಾರ್ಥಿ ವ್ಯವಹಾರಗಳ ಡೀನ್ ವಿಚಾರಣೆಯೊಂದನ್ನು ನಡೆಸಲಿದ್ದಾರೆ ಎಂದು ‘ಗೆಸ್ಟ್ ಪೋಸ್ಟ್’ ವರದಿ ಮಾಡಿದೆ.

Write A Comment