ಅಂತರಾಷ್ಟ್ರೀಯ

ಸುದ್ದಿ ಮಾಧ್ಯಮಗಳಿಗೆ ಫೇಸ್‌ಬುಕ್ ಕೊಡಲಿ ಪೆಟ್ಟು!

Pinterest LinkedIn Tumblr

facebook

ನವದೆಹಲಿ: ಫೇಸ್‌ಬುಕ್ ತೆರೆದಾಗ ನಿಮ್ಮ ಫೇಸ್‌ಬುಕ್ ಸ್ನೇಹಿತರ ಎಲ್ಲ ಅಪ್‌ಡೇಟ್‌ಗಳು ನಿಮ್ಮ ವಾಲ್‌ನಲ್ಲಿ ಕಾಣಿಸಿಕೊಂಡು ಕಿರಿಕಿರಿ ಅನುಭವಿಸುತ್ತಿದ್ದೀರಾ? ಫೇಸ್‌ಬುಕ್ ಬಳಸುವವರಿಗೆ ಫೇಸ್‌ಬುಕ್ ಸಂಸ್ಥೆ ಖುಷಿಯ ಸುದ್ದಿ ನೀಡಿದೆ. ಇನ್ನುಂದೆ ಸುದ್ದಿ ಮಾಧ್ಯಮಗಳ ಪುಟಗಳನ್ನು ಲೈಕ್ ಮಾಡಿದ ಪ್ರತಿಯೊಬ್ಬರಿಗೂ ನ್ಯೂಸ್ ಫೀಡ್ ಹೋಗೋದಿಲ್ಲ.

ನಿಮ್ಮ ಸ್ನೇಹಿತರು ಯಾವುದಾದರೂ ನ್ಯೂಸ್ ಪೇಜ್ ನಲ್ಲಿ ಕಮೆಂಟ್ ಮಾಡಿದರೂ ಅದು ನಿಮ್ಮ ಟೈಮ್ ಲೈನ್ ನಲ್ಲಿ ಕಾಣಿಸುವುದಿಲ್ಲ. ನಿಮ್ಮ ಸ್ನೇಹಿತರ ಸ್ಪೇಟಸ್ ಅಪ್ ಡೇಟ್ ಗೆ ಫೇಸ್‌ಬುಕ್ ಹೆಚ್ಚು ಪ್ರಾಮುಖ್ಯತೆ ಕೊಡಲಿದೆ.

ಫೇಸ್‌ಬುಕ್ ಸಂಸ್ಥೆ ತನ್ನದೇ ನ್ಯೂಸ್ ಫೀಡ್ ಯೋಜನೆಯನ್ನು ಹಮ್ಮಿಕೊಂಡಿದೆ. ಇನ್ನುಂದೆ ಫೇಸ್‌ಬುಕ್ ಸಂಸ್ಥೆಯೇ ಸುದ್ದಿಗಳನ್ನು ಬಿಡುಗಡೆ ಮಾಡಲಿದ್ದು, ಇತರ ಸುದ್ದಿ ಸಂಸ್ಥೆಗಳಿಂದ ಬರುವ ಸುದ್ಧಿಗಳಿಗೆ ಕಡಿವಾಣ ಹಾಕಲಿದೆ. ಹೀಗಾಗಿ ಸುದ್ದಿ ಸಂಸ್ಥೆಗಳ ಸುದ್ದಿಗಳು ಫೇಸ್‌ಬುಕ್ ಬಳಕೆದಾರರನ್ನು ತಲುಪುವುದ ಕಷ್ಟವಾಗಲಿದೆ.

Write A Comment