ರಾಷ್ಟ್ರೀಯ

ಕತ್ತರಿಸಿದ ಪತ್ನಿಯ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದ ಪತಿ

Pinterest LinkedIn Tumblr

mankillswife

ಕೊಯಂಬತ್ತೂರ್: ಪತ್ನಿಯ ತಲೆ ಕತ್ತರಿಸಿದ ಪತಿ, ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ತಮಿಳುನಾಡಿನ ವಡಕ್ಕಿಪಾಳ್ಯಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೆಂಡತಿ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದ ವ್ಯಕ್ತಿಯೊಬ್ಬ ತನ್ನನು ತಾನೇ ಪರಿಚಯಿಸಿಕೊಂಡಿದ್ದಾನೆ. ನನ್ನ ಹೆಸರು ಚಿನ್ನಪ್ಪರಾಜ್, ನಾರಾಯಣಚೆಟ್ಟಿಪಾಳ್ಯಂನಲ್ಲಿ ವಾಸವಾಗಿದ್ದೇನೆ. ನಾನು ನನ್ನ ಪತ್ನಿ ತಲೆ ಕತ್ತರಿಸಿದ್ದೇನೆ ಎಂದು ಹೇಳಿದ್ದಾನೆ. ಪತ್ನಿಯು ಅನೈತಿಕ ಸಂಬಂಧ ಹೊಂದಿರುವುದಕ್ಕೆ ಈತ ಪತ್ನಿಯ ತಲೆ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನಪ್ಪರಾಜ್ ಮತ್ತು ಪತ್ನಿ ಸೆಲ್ವಿ ತೆಂಗಿನ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಸೆಲ್ವಿಗೆ ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಈ ಸಂಬಂಧ ಚಿನ್ನಪ್ಪರಾಜ್ ಪತ್ನಿ ಸೆಲ್ವಿಗೆ ಎಚ್ಚರಿಸಿದ್ದನು. ಆದರೆ, ಆಕೆ ಇವನ ಮಾತು ಕೇಳದೆ ಹಿನ್ನಲೆಯಲ್ಲಿ ಆಕೆಯ ತಲೆಯನ್ನು ಚಿನ್ನಪ್ಪರಾಜ್ ಕತ್ತರಿಸಿ, ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಚಿನ್ನಪ್ಪರಾಜ್ ನನ್ನು ಬಂಧಿಸಿರುವ ಪೊಲೀಸರು ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಪೊಲಾಚಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಧೀಶರು ಆತನನ್ನು ಕೊಯಂಬತ್ತೂರ್ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದಾರೆ.

Write A Comment