ಅಂತರಾಷ್ಟ್ರೀಯ

ಮಂಗಳ ಗ್ರಹದಲ್ಲಿ ಅಪಾರ ಪ್ರಮಾಣದ ಮಂಜುಗಡ್ಡೆ ಪತ್ತೆ

Pinterest LinkedIn Tumblr

Marsice

ಲಂಡನ್‌: ಮಂಗಳ ಗ್ರಹದಲ್ಲಿ ಅಪಾರ ಪ್ರಮಾಣದ ಮಂಜುಗಡ್ಡೆ ಪದರಗಳಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮಂಗಳ ಗ್ರಹದಲ್ಲಿ ಭಾರಿ ಪ್ರಮಾಣದ ನೀರು ಇರುವುದನ್ನು ಪ್ರತಿಪಾದಿಸಿರುವ ವಿಜ್ಞಾನಿಗಳು, ಮಂಗಳನಲ್ಲಿ ಅಪಾರ ಪ್ರಮಾಣದ ಮಂಜುಗಡ್ಡೆ ಇದ್ದು, ಇದು ಸುಮಾರು 15 ಸಾವಿರ ಕೋಟಿ ಕ್ಯುಬಿಕ್‌ ಮೀಟರ್‌ಗಳಷ್ಟಾಗಬಹುದು. ಮಂಗಳ ಮೇಲ್ಮೈಯಲ್ಲಿ ಇದನ್ನು ಹರಡಿದರೆ ಒಂದು ಮೀಟರ್‌ಗಿಂತಲೂ ಹೆಚ್ಚು ದಪ್ಪದ ಮಂಜಿನ ಪದರವನ್ನು ಸೃಷ್ಟಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಗ್ರಹದ ಕೆಲವು ಪ್ರದೇಶಗಳ ಬಗ್ಗೆ ಅತ್ಯಂತ ಉತ್ತಮ ಗುಣಮಟ್ಟದ ಚಿತ್ರಗಳನ್ನು ಉಪಗ್ರಹಗಳು ಕಳುಹಿಸಿಕೊಟ್ಟಿವೆ. ಉಳಿದ ಪ್ರದೇಶಗಳ ಬಗೆಗಿನ ಮಾಹಿತಿ ಅಷ್ಟೊಂದು ಸಮಗ್ರವಾಗಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಮಂಜುಗಡ್ಡೆ ಪದರಗಳ ಮೇಲೆ ದಪ್ಪ ದೂಳಿನ ಪದರ ಇದೆ. ಈ ಹಿನ್ನಲೆಯಲ್ಲಿ ದೂಳಿನ ಪದರವೇ ಮಂಗಳ ಗ್ರಹದ ಮೇಲ್ಮೈ ತೋರುತ್ತದೆ.ಆದರೆ ಈ ದೂಳಿನ ಪದರದ ಕೆಳಭಾಗದಲ್ಲಿ ಮಂಜುಗಡ್ಡೆ ಇದೆ. ಈಗ ಮಂಜುಗಡ್ಡೆ ಪದರಗಳ ಗಾತ್ರ ಮತ್ತು ಪ್ರಮಾಣವನ್ನು ಅಧ್ಯಯನ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Write A Comment