ಅಂತರಾಷ್ಟ್ರೀಯ

ವಾಟ್ಸ್ಯಾಪ್ ಗೆ ಈಗ ತಿಂಗಳಿಗೆ 800 ದಶಲಕ್ಷ ಸಕ್ರಿಯ ಬಳಕೆದಾರರು

Pinterest LinkedIn Tumblr

Whatsapp

ವಿಶ್ವದ ಅತಿ ಜನಪ್ರಿಯ ಸಂದೇಶ ರವಾನೆ ಆಪ್ ವಾಟ್ಸ್ಯಾಪ್ ಗೆ ಈಗ ತಿಂಗಳಿಗೆ ೮೦೦ ದಶಲಕ್ಷ ಸಕ್ರಿಯ ಬಳಕೆದಾರರಿದ್ದಾರೆ.

ಫೇಸ್ಬುಕ್ ಒಡೆತನದ ವಾಟ್ಸ್ಯಾಪ್ ಸಿಇಒ ಜಾನ್ ಕೌಮ್ ಈ ವಿಷಯವನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. “ವಾಟ್ಸ್ಯಾಪ್- ಈಗ ತಿಂಗಳಲ್ಲಿ  ೮೦೦ ದಶಲಕ್ಷ ಸಕ್ರಿಯ ಬಳಕೆದಾರರಿಗೆ ಸೇವೆ ನೀಡುತ್ತಿದೆ. ಮಾಧ್ಯಮವರಿಗೊಂದು ಸೂಚನೆ. ನೊಂದಾಯಿಸಿದ ಮತ್ತು ಸಕ್ರಿಯ ಬಳಕೆದಾರರ ಸಂಖ್ಯೆ ಬೇರೆ ಬೇರೆ” ಎಂದು ಫೇಸ್ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ.

ಆಗಸ್ಟ್ ೨೧೦೪ ರಲ್ಲಿ ೬೦೦ ದಶಲಕ್ಷ ಮತ್ತು ಜವರಿಯಲ್ಲಿ ೭೦೦ ದಶಲಕ್ಷ ಸಕ್ರಿಯ ಬಳಕೆದಾರರಿದ್ದ ವಾಟ್ಸ್ಯಾಪ್ ಗೆ ಈಗ ಸಕ್ರಿಯ ಬಳಕೆದಾರರ ಸಂಖ್ಯೆ ೮೦೦ ದಶಲಕ್ಷಕ್ಕೆ ಬೆಳೆದಿರುವುದು ಉತ್ತಮ ಬೆಳವಣಿಗೆ ಎಂದು ಬಣ್ಣಿಸಲಾಗಿದೆ.

ಈ ಸೇವೆಯಲ್ಲಿ ಬರೆದ ಸಂದೇಶಗಳನ್ನು, ಮಾತಿನ ಸಂದೇಶಗಳನ್ನು, ಫೋಟೋಗಳನ್ನು, ವಿಡಿಯೋಗಳನ್ನು ಉಚಿತವಾಗಿ ಹಂಚಿಕೊಳ್ಳಬಹುದು. ಹಾಗೆಯೇ ಇತ್ತೀಚೆಗೆ ವಾಟ್ಸ್ಯಾಪ್ ಅಂತರ್ಜಾಲದ ಮೇಲೆ ಕರೆ ಸೇವೆಗೂ ಬಳಕೆದಾರರಿಗೆ ಅವಕಾಶ ನೀಡಿದೆ.

ಟ್ವಿಟ್ಟರ್ ಮತ್ತು ಇಂಸ್ಟಾಗ್ರಾಮ್ ಸೇವೆಗಳನ್ನು ಹಿಂದಿಕ್ಕಿರುವ ವಾಟ್ಸ್ಯಾಪ್ ಬಹಳ ಜನಪ್ರಿಯ ಸೇವೆಯಾಗಿದೆ.

Write A Comment