ಅಂತರಾಷ್ಟ್ರೀಯ

ಬ್ರೂನಿ ಯುವರಾಜನ ವೈಭವದ ಮದುವೆ; ಚಿನ್ನ, ವಜ್ರದ್ದೇ ದರ್ಬಾರ್!

Pinterest LinkedIn Tumblr

Broni

ಬ್ರೂನಿ: ಚಿನ್ನದ ಬಟ್ಟೆ, ವಜ್ರ ಖಚಿತ ಚಪ್ಪಲಿ, ವಜ್ರದ ಸಿಂಹಾಸನ, ವಜ್ರ ಹಾಗೂ ಹವಳದ ಕಿರೀಟ, ವಜ್ರ ಮತ್ತು ಹವಳದಿಂದ ಕೂಡಿದ ನೆಕ್ಲೇಸ್. ಇದು ವಿಶ್ವದ ಅಗರ್ಭ ಶ್ರೀಮಂತ ತನ್ನ ಮಗನ ಮದುವೆಯನ್ನು ವೈಭವದಿಂದ ಮಾಡಿದ ಪರಿ.

ವಿಶ್ವದ ಪ್ರಮುಖ ತೈಲ ಸರಬರಾಜು ರಾಷ್ಟ್ರಗಳಲ್ಲೊಂದಾದ ಶ್ರೀಮಂತ ಬ್ರೂನಿ ದೇಶದ ಹಸನಲ್ ಬೊಲ್ಕಿಯಾ ಸುಲ್ತಾನ್ ತನ್ನ ಮಗ ಅಬ್ದುಲ್ ಮಲ್ಲಿಕ್ ಮದುವೆಯನ್ನು ಹಿಂದೆ ಎಂದು ಕೇಳಿರದ, ಮುಂದೆಂದೂ ಕೇಳದಂತ ರೀತಿಯಲ್ಲಿ ಅದ್ಧೂರಿಯಾಗಿ ಮಾಡಿದ್ದಾರೆ.

ಮದುವೆಯಲ್ಲಿ ಆರಮನೆಯ ಮದುವೆ ಮಂಟಪದಿಂದ ಹಿಡಿದು ಬಳಕೆಯಾಗಿರುವ ಪ್ರತಿಯೊಂದ ವಸ್ತುಗಳಲ್ಲೂ ವಜ್ರ, ಚಿನ್ನ, ಮುತ್ತು ರತ್ನ, ಹವಳಗಳದ್ದೇ ಕಾರುಬಾರು. ಚಿನ್ನ ಬಟ್ಟೆ, ವಜ್ರದ ಆಭರಣಗಳು, ವಜ್ರ ಖಚಿತ ಚಪ್ಪಲಿ, ಚಿನ್ನ ಹಾಗೂ ವಜ್ರದ ಸಿಂಹಾಸನ ಅಷ್ಟೇ ಅಲ್ಲದೇ ಶುದ್ಧ ಚಿನ್ನದಿಂದಲೇ ತಯಾರಿಸಲಾದ ಹೂವಿನ ಬೊಕ್ಕೆಯನ್ನು ಬಳಸಲಾಗಿದೆ.

ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಸುಲ್ತಾನ ಹಾಗೂ ರಾಣಿ ಸಲೇಹಾಗೆ ಇರುವುದು 2 ಮಕ್ಕಳು ಅದರಲ್ಲಿ 2ನೇ ಮಗ 31 ವರ್ಷದ ಅಬ್ದುಲ್ ಮಲ್ಲಿಕ್ ಮುಂದಿನ ಬ್ರೂನಿ ಸಂಸ್ಥಾನದ ಒಡೆಯನಾಗುವನು. ಈತನ ಮದುವೆ 22 ವರ್ಷದ ದಯಾಂಕ್ಯೂ ರಾಬಿ ಅದ್ವೈ ಜೊತೆ ಮೋನರ್ಕ್ ಅರಮನೆಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.

ವಧುವರರರು ಚಿನ್ನದ ನೂಲಗಳಿಂದ ಮಾಡಿದ್ದ ಉಡುಪುಗಳನ್ನು ತೊಟ್ಟಿದ್ದನ್ನು ನೋಡಿ ಮದುವೆಗೆ ಬಂದ ಅತಿಥಿಗಳು ವಿಸ್ಮಿತರಾಗಿದ್ದರು. ಇದರ ಜೊತೆಗೆ ರಾಣಿ ದಯಾಂಕ್ಯೂ ರಾಬಿ ವಜ್ರ ಹಾಗೂ ಹವಳದ ಕಿರೀಟದ ಜೊತೆಗೆ ಅದೇ ಮಾದರಿಯಾ ನೆಕ್ಲೆಸ್ ಹಾಕಿದ್ದಳು. ಜೊತೆಗೆ ರಾಬಿಯ ಚಪ್ಪಲಿಗಳನ್ನು ವಿಶೇಷವಾದ ವಜ್ರದ ಹರಳುಗಳಿಂದ ತಯಾರಿಸಲಾಗಿತ್ತು. ಅಲ್ಲದೇ ರಾಣಿ ಕೈಯಲ್ಲಿ ಹಿಡಿದು ಕೊಂಡಿದ್ದ ಹೂವಿನ ಬೊಕ್ಕೆಯೂ ಕೂಡ ಚಿನ್ನ ಹಾಗೂ ರತ್ನಗಳಿಂದ ಅಲಂಕೃತಗೊಂಡಿತ್ತು.

ಎಪ್ರಿಲ್ 5 ರಂದು ಆರಂಭವಾಗಿರುವ ಈ ಅದ್ಧೂರಿ ಮದುವೆ 11 ದಿನಗಳ ಕಾಲ ನಡೆಯಲಿದೆ. ಈಗಾಗಲೇ ವಿಶ್ವದ ಮೂಲೆ ಮೂಲೆಗಳಿಂದ ಸುಮಾರು 5000ಕ್ಕೂ ಹೆಚ್ಚು ಗಣ್ಯರು ಮದುವೆಗೆ ಭೇಟಿ ನೀಡಿ ವಧುವರರಿಗೆ ಶುಭ ಹಾರೈಸಿದ್ದಾರೆ.

Write A Comment