ಮಾಸ್ಕೋ, ಏ.2: ರಷ್ಯಾದ ಪೂರ್ವ ಸಮುದ್ರದಲ್ಲಿ ಕಳೆದ ರಾತ್ರಿ ಸಂಭವಿಸಿದ ದೋಣಿ ದುರಂತದಲ್ಲಿ ಕನಿಷ್ಠ 70 ಮಂದಿ ಮೃತಪಟ್ಟಿದ್ದಾರೆ. ಈ ನತದೃಷ್ಟ ಬೋಟ್‌ನಲ್ಲಿ (ಟ್ರಾಲರ್) 132 ಜನರಿದ್ದರು. ಈಗಾಗಲೇ 59 ಮೃತದೇಹ ಪತ್ತೆಯಾಗಿದ್ದು, ಉಳಿದ ಮೃತದೇಹಗಳಿಗಾಗಿ ಶೋಧಕಾರ್ಯ ನಡೆದಿದೆ. ಉಳಿದ 62 ಪ್ರಯಾಣಿಕರು ಪಾರಾಗಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.
ಬದುಕುಳಿದವರೆಲ್ಲ ಬೋಟ್‌ನ ಸಿಬ್ಬಂದಿ. ರಷ್ಯಾದ ಪೂರ್ವದಲ್ಲಿರುವ ಕಾಮ್‌ಚಟ್ಕ ತೀರ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಮುಳುಗಿರುವ ದೋಣಿಯನ್ನು ದಲ್ನೀಯ್ ವೋಸ್ಟಕ್ ಎಂದು ಹೇಳಲಾಗಿದೆ.
ಈ ದೋಣಿಯಲ್ಲಿ 40 ಮಂದಿ ಮ್ಯಾನ್ಮಾರಿಗಳು, 78 ಜನ ರಷ್ಯನ್ನರು ಹಾಗೂ ಉಕ್ರೇನ್ ಲಿಥುವೇನಿಯಾ ಮತ್ತು ವನೂವಾಟು ಪ್ರಾಂತ್ಯಗಳಿಗೆ ಸೇರಿದ ಪ್ರಜೆಗಳಿದ್ದರು ಎಂದು ಕರಾವಳಿ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.