ಅಂತರಾಷ್ಟ್ರೀಯ

ಮತ್ತೇರಿಸುವ ಮದ್ಯಕ್ಕೆ ಮಹಾತ್ಮನ ಹೆಸರು

Pinterest LinkedIn Tumblr

Beer-Gandhi

ಹೈದರಾಬಾದ್: ಅಮೇರಿಕಾದ ಮದ್ಯ ಉತ್ಪಾದನಾ ಸಂಸ್ಥೆಯೊಂದು ತನ್ನ ಬಿಯರ್ ಬ್ರಾಂಡ್ ಒಂದಕ್ಕೆ ಗಾಂಧಿ ಅವರ ಹೆಸರು ಇಟ್ಟು, ಅವರ ಚಿತ್ರವನ್ನೂ ಕೂಡ ಉಪಯೋಗಿಸಿಕೊಂಡಿರುವುದು ವಿಪರ್ಯಾಸ. ತಮ್ಮ ಜೀವಿತಾವಧಿಯಲ್ಲಿ ಮದ್ಯಪಾನವನ್ನು ತೀವ್ರವಾಗಿ ವಿರೋಧಿಸಿದ್ದ ಮಹಾತ್ಮಾ ಗಾಂಧಿ ಅವರ ಹೆಸರು ಈ ರೀತಿ ದುರ್ಬಳಕೆಯಾಗಿರುವುದು ಹಲವರನ್ನು ಸಿಟ್ಟಿಗೆ ಈಡು ಮಾಡಿದೆ.

ಅಮೇರಿಕಾ ಮೂಲದ ‘ನ್ಯೂ ಇಂಗ್ಲೆಂಡ್ ಬ್ರ್ಯೂಯಿಂಗ್ ಕಂಪನಿ’ ಬಿಯರ್ ಬ್ರಾಂಡ್ ಒಂದಕ್ಕೆ ‘ಗಾಂಧಿ ಬಾಟ್’ ಎಂದು ಹೆಸರಿಟ್ಟು, ಬಾಟಲ್ ಮತ್ತು ಟಿನ್ ಗಳ ಮೇಲೆ ಗಾಂಧಿ ಅವರ ಚಿತ್ರಗಳನ್ನು ಮುದ್ರಿಸಿದೆ.

ಇದರಿಂದ ಕುಪಿತಗೊಂಡಿರುವ ಹೈದರಾಬಾದ್ ಮೂಲದ ವಕೀಲ ಜನಾರ್ಧನ್ ಗೌಡ್(೩೮) ತೆಲಂಗಾಣದಲ್ಲಿ ಈ ನಡೆಯನ್ನು ಪ್ರಶ್ನಿಸಿ ಮೆಜೆಸ್ಟ್ರೇಟ್ ನ್ಯಾಯಾಲಯದಲ್ಲಿ ದ್ಯಾವೆ ಹೂಡಿದ್ದಾರೆ. ಅಮೇರಿಕಾ ಭಾರತದ ನಾಗರಿಕರಿಗೆ ಸಮನ್ಸ್ ಹೊರಡಿಸಬಹುದಾದರೆ ಭಾರತೀಯರಿಗೆ ನೋವುಂಟು ಮಾಡಿರುವ ಈ ಸಂಸ್ಥೆಗೆ ನಾವು ಕೂಡ ನೋಟಿಸ್ ಕಳುಹಿಸಬೇಕು ಎನ್ನುವ ಜನಾರ್ಧನ್, ಸದ್ಯಕ್ಕೆ ಮೆಜೆಸ್ಟ್ರೇಟ್ ಅವರು ಕಾನೂನಿನಲ್ಲಿ ಅಮೇರಿಕಾ ಸಂಸ್ಥೆಗೆ ಸಮನ್ಸ್ ಕಳುಹಿಸುವ ಸೌಲಭ್ಯ ಇದೆಯೇ ಎಂಬುದನ್ನು ತಿಳಿದುಕೊಳ್ಳಲು ಸಮಯವನ್ನು ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಕಾನೂನು ಬದ್ಧವಾಗಿ ಆ ಸಂಸ್ಥೆಗೆ ನೋಟಿಸ್ ಕೊಡಲು ಸಾಧ್ಯವಾಗದೆ ಹೋದರೆ ಕೇಂದ್ರ ಸರ್ಕಾರ ಇಂತಹ ಸಂಸ್ಥೆಗಳನ್ನು ನ್ಯಾಯಾಲಯಕ್ಕೆ ಎಳೆದು ತರುವ ಹೊಸ ಕಾನೂನನ್ನು ಸೃಷ್ಟಿಸಬೇಕು ಎಂದಿದ್ದರೆ.

Write A Comment