
ಬೆರ್ಹಮಪುರ್: ಗಂಜಾಂ ಜಿಲ್ಲೆಯ ಭಂಜನಗರ ಪೊಲೀಸ್ ಠಾಣೆಯಿಂದ ೧೦೦ ಕಿ ಮೀ ದೂರದಲ್ಲಿರುವ ಮುಜ್ಜಗರ್ ನಲ್ಲಿ ನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯನ್ನು ರೇಪ್ ಮಾಡಿದ್ದಕ್ಕೆ ೨೨ ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಬಂಧಿತನಾಗಿರುವ ಆಪಾದಿತ ಮಿಥುನ್ ಗೌಡ, ಸಂತ್ರಸ್ತ ಬಾಲಕಿಯ ಪಕ್ಕದ ಮನೆಯವನು. ಬಾಲಕಿಯ ಮನೆಯವರು ಶುಕ್ರವಾರ ಯಾರೂ ಇಲ್ಲದ ಸಮಯದಲ್ಲಿ ಈ ದುಷ್ಕೃತ್ಯವೆಸೆದಿದ್ದಾನೆ ಎಂದು ಭಂಜನಗರ್ ಪೊಲೀಸ್ ಠಾಣೆಯಾ ಇನ್ಸ್ಪೆಕ್ಟರ್ ಎ ಕೆ ಸಾಹು ತಿಳಿಸಿದ್ದಾರೆ.
ಈ ನಿರುದ್ಯೋಗಿ ಯುವಕ, ಆ ಬಾಲಕಿಯನ್ನು ಆಟ ಆಡಿಸುವ ನೆಪದಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ ಈ ಕೃತ್ಯವೆಸಗಿದ್ದಾನೆ ಎಂದಿದ್ದಾರೆ ಪೊಲೀಸರು. ಆ ಸಂಸ್ತ್ರಸ್ತ ಬಾಲಕಿ ಮನೆಗೆ ಬಂದ ನಂತರ ನಡೆದ ಘಟನೆಯನ್ನು ವಿವರಿಸಿದಾಗ, ತಾಯಿ ರಾತ್ರಿ ನೆರೆಹೊರೆಯ ಸಾರ್ವಜನಿಕರಿಗೆ ಈ ವಿಷಯ ತಿಳಿಸಿದ್ದಾರೆ.
ಆಪಾದಿತನನ್ನು ನೆನ್ನೆ ಬಂಧಿಸಲಾಗಿದ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಹಾಗೆಯೇ ಸಂತ್ರಸ್ತ ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.