ಅಂತರಾಷ್ಟ್ರೀಯ

ಪಾಕ್ ಸೇನಾ ಶಾಲೆ ಮೇಲೆ ಉಗ್ರರ ದಾಳಿ: 20 ಮಕ್ಕಳು ಸಾವು

Pinterest LinkedIn Tumblr

mm

ಪೇಶಾವರ: ಪಾಕಿಸ್ತಾನದ ಪೇಶಾವರದಲ್ಲಿ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಎಂಟು ಜನ ಉಗ್ರರು ಪೇಶಾವರದ ಮಿಲಿಟರಿ ಸ್ಕೂಲ್‍ಗೆ ನುಗ್ಗಿದ್ದು ಶಿಕ್ಷಕರು ಮಕ್ಕಳನ್ನು ಸೇರಿದಂತೆ 1500 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ.

ಶಾಲೆಯ ಒಳಗಡೆ ಉಗ್ರನೊಬ್ಬ ತನ್ನನ್ನು ತಾನೇ ಸ್ಪೋಟಿಸಿಕೊಂಡಿರುವುದರಿಂದ ಇನ್ನೂ ಹೆಚ್ಚಿನ ಅನಾಹುತವಾಗಿರುವ ಸಂಭವವಿದೆ. ಈ ಶಾಲೆಯಲ್ಲಿ 1500ಕ್ಕಿಂತ ಹೆಚ್ಚು ಮಕ್ಕಳು ಹಾಗು 70ಕ್ಕೂ ಹೆಚ್ಚು ಶಿಕ್ಷಕರಿದ್ದು, ಉಗ್ರರು ಎಲ್ಲರನ್ನು ಒತ್ತೆಯಿರಿಸಿಕೊಂಡಿದ್ದಾರೆ.

ಸೇನೆಯ ಸಮವಸ್ತ್ರ ಧರಿಸಿ ಶಾಲೆಗೆ ನುಗ್ಗಿದ್ದ ಉಗ್ರರು ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 8 ಉಗ್ರರು ನಡೆಸಿರುವ ದಾಳಿಯಲ್ಲಿ 20 ಮಕ್ಕಳು, ಒಬ್ಬ ಶಿಕ್ಷಕ, ಒಬ್ಬ ಸೆಕ್ಯೂರಿಟಿ ಆಫೀಸರ್ ಮೃತಪಟ್ಟಿದ್ದು, 50 ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಒಳಗಡೆ ನುಗ್ಗಿರುವ ಎಲ್ಲರೂ ಸುಸೈಡ್ ಬಾಂಬರ್‍ಗಳಾಗಿದ್ದಾರೆ ಎನ್ನುವ ಶಂಕೆಯಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಈ ದಾಳಿಯ ಹೊಣೆಯನ್ನು ತೆಹರಿಕ್ ಇ ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ತಾಲಿಬಾನ್ ಮೇಲೆ ಪಾಕಿಸ್ಥಾನ ಸೇನೆ ನಡೆಸುತ್ತಿರುವ ಕಾರ್ಯಚರಣೆಯನ್ನು ನಿಲ್ಲಿಸದಿದ್ದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಸಂಘಟನೆ ಎಚ್ಚರಿಕೆ ನೀಡಿದೆ. ಪಾಕಿಸ್ಥಾನ ಸೇನೆ ಶಾಲೆಯನ್ನು ಸುತ್ತುವರೆದಿದ್ದು, 2 ಹೆಲಿಕಾಪ್ಟರ್ ಬಳಸಿ ಉಗ್ರರ ವಿರುದ್ದ ಕಾರ್ಯಚರಣೆ ಆರಂಭಿಸಿದೆ.

Write A Comment