ಅಂತರಾಷ್ಟ್ರೀಯ

ಮಾತಿಗೂ ಮುನ್ನ ಕಾಶ್ಮೀರ ನಾಯಕರ ಭೇಟಿ: ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌

Pinterest LinkedIn Tumblr

Shariff

ಇಸ್ಲಾಮಾಬಾದ್ (ಪಿಟಿಐ): ಭಾರತದ ಜೊತೆಗೆ ಶಾಂತಿ ಮಾತುಕತೆಯಲ್ಲಿ ತೊಡಗುವ ಮುನ್ನ ಕಾಶ್ಮೀರಿ ಪ್ರತ್ಯೇಕತಾವಾದಿಗಳೊಂದಿಗೆ ಪಾಕಿಸ್ತಾನವು ಮಾತುಕತೆ ನಡೆಸಲಿದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರು ಗುರುವಾರ ಸ್ಪಷ್ಟ ಪಡಿಸಿದ್ದಾರೆ.

‘ಕಾಶ್ಮೀರ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬಹುದು ಎಂಬುದು ನಮ್ಮ ಮೂಲಭೂತ ನಂಬಿಕೆ. ನಮ್ಮ ಸರ್ಕಾರ ಭಾರತದೊಂದಿಗೆ ಮಾತುಕತೆ ಆರಂಭಿಸಿದೆ. ಆದರೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ನಿಗದಿತ ಮಾತುಕತೆಯನ್ನು ಭಾರತವು ರದ್ದುಗೊಳಿಸಿದೆ’ ಎಂದು ಪಾಕ್‌ ಆಕ್ರಮಿತ ಕಾಶ್ಮೀರ ರಾಜಧಾನಿ ಮುಜಫ್ಪರ್‌ಬಾದ್‌ನಲ್ಲಿ ಅವರು ತಿಳಿಸಿದ್ದಾರೆ.

‘ಭಾರತದೊಂದಿಗೆ ಮಾತುಕತೆ ಆರಂಭಿಸುವ ಮುನ್ನ ಕಾಶ್ಮೀರಿ ನಾಯಕರೊಂದಿಗೆ ಸಮಾಲೋಚಿಸಲು ನಿರ್ಧರಿಸಿದ್ದೆ’ ಎಂದೂ ಅವರು ಹೇಳಿದ್ದಾರೆ.

ನೇಪಾಳದಲ್ಲಿ ಮುಂದಿನ ವಾರ ನಡೆಯಲಿರುವ ಸಾರ್ಕ್‌  ಶೃಂಗಸಭೆಯ ಮುನ್ನ ಷರೀಫ್‌ ಅವರು ಈ ಹೇಳಿಕೆ ನೀಡಿದ್ದಾರೆ.

ಕಾಶ್ಮೀರ ಸಮಸ್ಯೆ ನಿರ್ಣಯಿಸಲು ಮಾತುಕತೆ ಆರಂಭಿಸುವಂತೆ ಭಾರತದ ಮೇಲೆ ಒತ್ತಡ ಹೇರುವ ಪಾತ್ರ ನಿಭಾಯಿಸುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಷರೀಫ್‌ ಕೋರಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ  (ಎಲ್‌ಒಸಿ) ಭಾರತೀಯ ಪಡೆಗಳು ನಡೆಸುವ ಅಪ್ರಚೋದಿತ ದಾಳಿಗೆ ಪಾಕಿಸ್ತಾನದ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ. ಭಾರತ ನಡೆಸುವ ದಾಳಿ ವಿಶ್ವವೃದ್ಧಿಸುವ ಕ್ರಮಗಳಿಗೆ ತೊಂದರೆ ನೀಡಿದೆ ಎಂದು ಷರೀಫ್‌ ನುಡಿದಿದ್ದಾರೆ.

Write A Comment