ಅಂತರಾಷ್ಟ್ರೀಯ

ಮೋದಿ ಭಾಷಣ ಕೇಳಲು ಹರಿದು ಬಂತು ಜನಸಾಗರ

Pinterest LinkedIn Tumblr

modi1

ಸಿಡ್ನಿ: ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಸಿಡ್ನಿಯಲ್ಲಿ ಜನಸಾಗರವೇ ಹರಿದು ಬಂದಿತ್ತು.

ಬ್ರಿಸ್ಬೇನ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಮಹತ್ವಪೂರ್ಣ ವಿಜಯವೊಂದನ್ನು ಸಾಧಿಸಿದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಿಡ್ನಿಗೆ ಭೇಟಿ ನೀಡಿದ್ದರು.

ರೈಲಿನಲ್ಲಿ ಸಿಡ್ನಿಗೆ ತೆರಳಿದ ಪ್ರಧಾನಿ ಮೋದಿ ಅವರನ್ನು ಅಲ್ಲಿನ ಜನತೆ ಅದ್ಧೂರಿ ಸ್ವಾಗತದಿಂದ ಬರಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಅಲ್ಫೋನ್ಸ್ ಅರೆನಾ ಕ್ರೀಡಾಂಗಣದಲ್ಲಿ ಆಯೋಜಿಸಿಲಾಗಿದ್ದ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದರು. ಈ ಕಾರ್ಯಕ್ರಮಕ್ಕೆ 30 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಆಸ್ಟ್ರೇಲಿಯಾದ ನೃತ್ಯಗಾರರು ಅಲ್ಲಿನ ಸಾಂಪ್ರಾಯಿಕ ನೃತ್ಯವನ್ನು ಪ್ರದರ್ಶಿಸುವುದರ ಮೂಲಕ ಮೋದಿ ಅವರನ್ನು ಸ್ವಾಗತಿಸಿದ್ದಾರೆ. ಅದ್ಧೂರಿ ಸ್ವಾಗತಕ್ಕೆ ಹಾಗೂ ಸಾಂಪ್ರಾದಾಯಿಕ ನೃತ್ಯ ಪ್ರದರ್ಶಿಸಿದ ನೃತ್ಯಾಗಾರರಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮೊದಲಿಗೆ, ಮೋದಿ ಸರ್ಕಾರದ ಸಾಧನೆ ಮತ್ತು ವಿವಿಧ ದೇಶಗಳಿಗೆ ಮೋದಿ ಭೇಟಿ ನೀಡಿದ್ದ ವಿಡಿಯೋವನ್ನು ಪ್ರದರ್ಶನ ಮಾಡಲಾಯಿತು. ನಂತರ ವೇದ ಘೋಷಗಳ ಮೂಲಕ ಸಾಂಪ್ರದಾಯಿಕವಾಗಿ ಮೋದಿ ಅವರನ್ನು ವೇದಿಕೆ ಮೇಲೆ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಸಚಿವರು, ರಾಜಕೀಯ ನಾಯಕರು ಭಾಗಿಯಾಗಿದ್ದರು.

Write A Comment