ಅಂತರಾಷ್ಟ್ರೀಯ

ನೀರಿಗಾಗಿ ಚಂದ್ರನಲ್ಲಿ ಗಣಿಗಾರಿಕೆ! ನಾಸಾ ವಿಜ್ಞಾನಿಗಳಿಂದ ಅನ್ವೇಷಣೆ

Pinterest LinkedIn Tumblr

naasa

ವಾಷಿಂಗ್ಟನ್, ಅ.10: ಚಂದ್ರನ ಮೇಲ್ಮೈಯಲ್ಲಿ ಮಾನವ ವಸಾಹತುಗಳ ನಿರ್ಮಾಣ ಯಶಸ್ವಿಯಾದಲ್ಲಿ ಭವಿಷ್ಯದಲ್ಲಿ ಮಾನವ ಸಹಿತ ನೆಲೆಗಳಿಗೆ ನೀರನ್ನು ಪೂರೈಸುವ ದೃಷ್ಟಿಯಿಂದ ನಾಸಾದ ವಿಜ್ಞಾನಿಗಳು ಚಂದ್ರನ ಮೇಲ್ಮೈಯನ್ನು ಅಗೆದು ನೀರಿನ ಅನ್ವೇಷಣೆ ನಡೆಸುವ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ.

ಚಂದ್ರನ ಮೇಲ್ಮೈಯಲ್ಲಿರುವ ಮಂಜುಗಡ್ಡೆಗಳಲ್ಲಿ ಹಾಗೂ ಚಂದ್ರನ ಇತರ ನೆಲೆಗಳಲ್ಲಿ ಶೇಖರಣೆಗೊಂಡಿರುವ ನೀರನ್ನು ಪಡೆಯುವ ವಿಧಾನಗಳ ವಿಶ್ಲೇಷಣೆ ನಡೆಸಲು ಎರಡು ಪ್ರತ್ಯೇಕ ಯೋಜನೆಗಳನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಅಭಿವೃದ್ಧಿಪಡಿಸತೊಡಗಿದೆ.

ಈ ನಿಟ್ಟಿನಲ್ಲಿ ‘ಲೂನಾರ್ ಫ್ಲಾಶ್‌ಲೈಟ್’ ಹಾಗೂ ‘ರಿಸೋರ್ಸ್ ಪ್ರಾಸ್ಪೆಕ್ಟರ್ ಮಿಶನ್’ ಎಂಬ ಎರಡು ಯೋಜನೆಗಳನ್ನು ಅನುಕ್ರಮವಾಗಿ 2017 ಹಾಗೂ 2018ರಲ್ಲಿ ಪ್ರಾರಂಭಿಸುವುದನ್ನು ನಿಗದಿಪಡಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.

‘‘ಒಂದು ವೇಳೆ ಚಂದ್ರನಲ್ಲಿ ಮಾನವರು ವಾಸಮಾಡತೊಡಗಿದಲ್ಲಿ ಕುಡಿಯಲು ನೀರು, ಉಸಿರಾಟಕ್ಕೆ ಗಾಳಿ, ಇಂಧನ ಹಾಗೂ ಇನ್ನೂ ಹೆಚ್ಚಿನ ಆವಶ್ಯಕ ವಸ್ತುಗಳು ಲಭ್ಯವಾಗಬೇಕಾಗುತ್ತದೆ’’ ಎಂದು ‘ಲೂನಾರ್ ಫ್ಲಾಶ್‌ಲೈಟ್’ ಯೋಜನೆಯ ಮುಖ್ಯಸ್ಥ ಬರ್ಬರಾ ಕೊಹೆನ್ ತಿಳಿಸಿದ್ದಾರೆ.

Write A Comment