ಅಂತರಾಷ್ಟ್ರೀಯ

ಬ್ರಿಟನ್, ಐರ್‌ಲ್ಯಾಂಡ್ ಪ್ರಯಾಣಕ್ಕೆ ಭಾರತೀಯರಿಗೆ ಏಕ ವೀಸಾ

Pinterest LinkedIn Tumblr

visa

ಲಂಡನ್, ಅ. 7: 2014 ಡಿಸೆಂಬರ್ ವೇಳೆಗೆ ಭಾರತೀಯರು ಒಂದೇ ವೀಸಾದಲ್ಲಿ ಐರ್‌ಲ್ಯಾಂಡ್ ಮತ್ತು ಬ್ರಿಟನ್‌ಗೆ ಪ್ರಯಾಣಿಸಬಹುದಾಗಿದೆ.

ಏಕ ಪ್ರಯಾಣ ಪ್ರದೇಶ ಕಲ್ಪನೆಯನ್ನು ಬಲಪಡಿಸುವ ಉದ್ದೇಶದಿಂದ ರಿಪಬ್ಲಿಕ್ ಆಫ್ ಐರ್‌ಲ್ಯಾಂಡ್‌ನೊಂದಿಗಿನ ತಿಳುವಳಿಕೆ ಪತ್ರವೊಂದಕ್ಕೆ ಬ್ರಿಟನ್ ಗೃಹ ಕಾರ್ಯದರ್ಶಿ ತೆರೇಸಾ ಮೇ ಸೋಮವಾರ ಸಹಿ ಹಾಕಿದರು.

ಈ ಒಪ್ಪಂದವು ಬ್ರಿಟನ್ ಮತ್ತು ಐರ್‌ಲ್ಯಾಂಡ್ ನಡುವೆ ಅಂಕಿಸಂಖ್ಯೆ ಮತ್ತು ಮಾಹಿತಿ ವಿನಿಮಯಕ್ಕೆ ದಾರಿ ಮಾಡಿಕೊಡುತ್ತದೆ ಹಾಗೂ ಭಾರತ ಮತ್ತು ಚೀನಾಗಳ ಪ್ರಯಾಣಿಕರು ಈ ಎರಡು ದೇಶಗಳ ನಡುವೆ ಸುಲಭವಾಗಿ ಸಂಚರಿಸಲು ಅನುವು ಮಾಡಿಕೊಡುತ್ತದೆ.

ಯೋಜನೆಯು ಚೀನಾದಲ್ಲಿ ಅಕ್ಟೋಬರ್ ಕೊನೆಯ ವೇಳೆಗೆ ಆರಂಭಗೊಳ್ಳುತ್ತದೆ ಹಾಗೂ ಅದರ ಬಳಿಕ ಶೀಘ್ರವೇ ಭಾರತದಲ್ಲೂ ಜಾರಿಗೆ ಬರುವುದು.

ಬ್ರಿಟಿಶ್-ಐರಿಶ್ ವೀಸಾ ಯೋಜನೆಯ ಪ್ರಕಾರ, ಕೆಲವು ಮಾದರಿಯ ಐರಿಶ್ ಕಿರು ಅವಧಿಯ ವಾಸ್ತವ್ಯದ ವೀಸಾಗಳನ್ನು ಹೊಂದಿದವರು ತಮ್ಮ ಪ್ರಯಾಣವನ್ನು ಬ್ರಿಟನ್‌ಗೆ ಮುಂದುವರಿಸಬಹುದಾಗಿದೆ ಹಾಗೂ ಕೆಲವು ಮಾದರಿಯ ಬ್ರಿಟನ್ ಪ್ರವಾಸಿ ವೀಸಾಗಳನ್ನು ಹೊಂದಿದವರು ಐರ್‌ಲ್ಯಾಂಡ್‌ಗೆ ತಮ್ಮ ಪ್ರಯಾಣವನ್ನು ಮುಂದುವರಿಸಬಹುದು.

Write A Comment