ಅಂತರಾಷ್ಟ್ರೀಯ

ಪಾತಕಿ ದಾವೂದ್ ಹಸ್ತಾಂತರ : ಭಾರತಕ್ಕೆ ಅಮೆರಿಕ ನೆರವು

Pinterest LinkedIn Tumblr

Dawood-Ibrahim

ವಾಷಿಂಗ್ಟನ್, ಅ.1: ಭಯೋತ್ಪಾದಕ ಸಂಘಟನೆಗಳಾದ ಎಲ್‍ಇಟಿ, ಜೆಇಎಂ, ಡಿ ಕಂಪೆನಿ, ಅಲ್‍ಖೈದಾ ಮತ್ತು ಹಕ್ಕಾನಿ ಜಾಲಗಳನ್ನು ಜಂಟಿಯಾಗಿ ಸದೆ ಬಡೆಯಲು ಭಾರತ-ಅಮೆರಿಕ ಕೈ ಜೋಡಿಸಿದ್ದು, 1993ರ ಮುಂಬೈ ಸರಣಿ ಸ್ಫೋಟದ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಸ್ತಾಂತರ ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ಅಮೆರಿಕದ ನೆರವು ಪಡೆಯುವ ಸಾಧ್ಯತೆ ಇದೆ.

ಭಯೋತ್ಪಾದನೆ ನಿಗ್ರಹಕ್ಕೆ ಉಭಯ ರಾಷ್ಟ್ರಗಳ ನಾಯಕರು ನಿನ್ನೆ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಪರಸ್ಪರ ಕೈ ಜೋಡಿಸುವ ಬಗ್ಗೆ ತೀರ್ಮಾನಿಸಿ, ಜಂಟಿ ಹೇಳಿಕೆ ನೀಡಿದ ಬೆನ್ನಲ್ಲೇ ಅಮೆರಿಕದ ಖಜಾನೆ ಇಲಾಖೆ ಅಧಿಕಾರಿಗಳು ಪಾಕಿಸ್ತಾನ ಮೂಲದ ಎರಡು ಭಯೋತ್ಪಾದಕ ಸಂಘಟನೆಗಳು ಹಾಗೂ ಕೆಲವು ವ್ಯಕ್ತಿಗಳ ಹಣಕಾಸು ವ್ಯವಹಾರಗಳ ಸಂಬಂಧ ಹೊಂದಿರುವ ಜಾಲಗಳ ಮೇಲೆ ನಿರ್ಬಂಧ ಹೇರಿ ಸ್ಥಗಿತಗೊಳಿಸಿದ್ದಾರೆ.

ವಿಶ್ವದಲ್ಲಿ ಹಿಂಸಾಚಾರ ನಡೆಸಿ ಶಾಂತಿ ಕದಡುವುದು, ಅಭಿವೃದ್ಧಿ ಕುಂಠಿತಗೊಳಿಸುವುದು ಸೇರಿದಂತೆ ಜನತೆಯಲ್ಲಿ ಭಯಹುಟ್ಟಿಸುತ್ತಿರುವ ಅಲ್‍ಖೈದಾ, ಲಷ್ಕರ್-ಎ-ತೊಯ್ಬಾ, ಜೈಷ್-ಎ- ಮೊಹಮ್ಮದ್, ಡಿ ಕಂಪೆನಿ ಹಕ್ಕಾನೀಸ್ ಜಾಲಗಳನ್ನು ಮಟ್ಟ ಹಾಕಲು ಅಮೆರಿಕ ಮತ್ತು ಬಾರತದ ನಡುವೆ ಜಂಟಿ ಕಾರ್ಯಾಚರಣೆ ಒಪ್ಪಂದ ಬಗ್ಗೆ ಹೇಳಿಕೆ ನೀಡಿದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಎರಡೂ ದೇಶಗಳಲ್ಲು ಭದ್ರತೆ ಮತ್ತು ರಕ್ಷಣೆ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ನಾಯಕರೂ ನಿನ್ನೆ ಜಂಟಿ ಹೇಳಿಕೆ ನೀಡಿದ್ದರು. ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಜಾಲವನ್ನು ಡಿ ಕಂಪೆನಿ ಎಂದೇ ಕರೆಯಲಾಗುತ್ತಿದ್ದು, 1993ರ ಮಾ.12ರಂದು ನಡೆದ ಮುಂಬೈ ಸರಣಿ ಸ್ಫೋಟದಲ್ಲಿ 250 ಮಂದಿ ಸಾವನ್ನಪ್ಪಿ, 700 ಮಂದಿ ಗಾಯಗೊಂಡಿದ್ದರು. ಈ ಸ್ಫೋಟದ ರೂವಾರಿ ಸ್ವತಃ ದಾವೂದ್ ಆಗಿದ್ದ.

Write A Comment