ಅಂತರಾಷ್ಟ್ರೀಯ

ಮಾದಕ ದ್ರವ್ಯ ಪೂರೈಕೆ ಮಾಡಿದ ಸಂಶಯದಲ್ಲಿ ಜಾಕೀಚಾನ್ ಪುತ್ರನ ಬಂಧನ

Pinterest LinkedIn Tumblr

Jais

ಬೀಜಿಂಗ್, ಸೆ. 17: ಮಾದಕ ದ್ರವ್ಯ ಪೂರೈಕೆ ಮಾಡಿದ ಸಂಶಯದಲ್ಲಿ ಹಾಂಕಾಂಗ್‌ನ ಮಾರ್ಶಲ್ ಆರ್ಟ್ಸ್ ಚಿತ್ರ ತಾರೆ ಜಾಕೀ ಚಾನ್ ಪುತ್ರನನ್ನು ಬೀಜಿಂಗ್ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಬುಧವಾರ ಹೇಳಿದ್ದಾರೆ. ಈ ಆರೋಪಕ್ಕೆ ಗರಿಷ್ಠ ಮೂರು ವರ್ಷಗಳ ಸೆರೆವಾಸದ ಶಿಕ್ಷೆಯಿದೆ.

ಒಂದು ವಾರದ ಹಿಂದೆ ಪೊಲೀಸರು ಮಾಡಿದ ಮನವಿಯನ್ವಯ ನಟ ಜೇಯ್ಸೀ ಚಾನ್‌ನ ಔಪಚಾರಿಕ ಬಂಧನಕ್ಕೆ ಅನುಮೋದನೆ ನೀಡಿರುವುದಾಗಿ ಡಾಂಗ್‌ಚೆಂಗ್ ಜಿಲ್ಲಾ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಆಗಸ್ಟ್ 14ರಂದು ಚೀನಾ ಅಧಿಕಾರಿಗಳು ನಡೆಸಿದ ಮಾದಕ ದ್ಯವ್ಯ ನಿಗ್ರಹ ಕಾರ್ಯಾಚರಣೆಯ ವೇಳೆ 31 ವರ್ಷದ ಜೇಯ್ಸೀ ಚಾನ್‌ರನ್ನು ಪೊಲೀಸರು ಬಂಧಿಸಿದ್ದರು. ಈ ಕಾರ್ಯಾಚರಣೆಯ ವೇಳೆ ಬಂಧಿತರಾದ ಅತ್ಯಂತ ಪ್ರತಿಷ್ಠಿತ ಖ್ಯಾತನಾಮ ವ್ಯಕ್ತಿ ಅವರಾಗಿದ್ದಾರೆ. ಅವರ ಜೊತೆಗೆ ತೈವಾನ್‌ನ ಚಿತ್ರ ತಾರೆ ಕೋ ಕಾಯ್‌ರನ್ನೂ ಬಂಧಿಸಲಾಗಿತ್ತು.

ಈ ಇಬ್ಬರೂ ನಟರು ಮರಿಜುವಾನ ಸೇವಿಸಿದ್ದು ಪರೀಕ್ಷೆಗಳಲ್ಲಿ ಖಾತ್ರಿಯಾಗಿತ್ತು. ಅದೂ ಅಲ್ಲದೆ, ತಾವು ಮಾದಕ ದ್ರವ್ಯವನ್ನು ಬಳಸುವುದನ್ನು ಇಬ್ಬರೂ ನಟರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದರು. 100 ಗ್ರಾಂ ಮಾದಕ ದ್ರವ್ಯವನ್ನು ಪೊಲೀಸರು ಚಾನ್‌ರ ಮನೆಯಿಂದ ವಶಪಡಿಸಿಕೊಂಡಿದ್ದರು.

Write A Comment