ರಾಷ್ಟ್ರೀಯ

ಮಾಜಿ ಐಪಿಎಸ್ ಅಧಿಕಾರಿ, ಸಿಂಗಂ ಖ್ಯಾತಿಯ ಅಣ್ಣಾಮಲೈ ಹಿನ್ನಡೆ

Pinterest LinkedIn Tumblr

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ, ಸಿಂಗಂ ಖ್ಯಾತಿಯ ಅಣ್ಣಾಮಲೈ ಹಿನ್ನಡೆ ಅನುಭವಿಸಿದ್ದಾರೆ.

ತನ್ನ ಹುಟ್ಟೂರು ಅರವಕುರಿಚಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿರುವ ಅಣ್ಣಾಮಲೈ ಅವರು ಹಿನ್ನಡೆ ಅನುಭವಿಸಿದ್ದಾರೆ. ಡಿಎಂಕೆ ಅಭ್ಯರ್ಥಿ ಎಲಾಂಗೋ.ಆರ್ ಇಲ್ಲಿ ಮುನ್ನಡೆ ಸಾಧಿಸಿದ್ದಾರೆ.

ತಮಿಳುನಾಡಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಹೊಂದಿದೆ. ಧರ್ಮಾಪುರಂ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಎಲ್.ಮುರುಗನ್, ತಿರುವೆನೆಲ್ಲಿ ಕ್ಷೇತ್ರದಲ್ಲಿ ನೈನರ್ ನಾಗೇಂದ್ರನ್ ಮತ್ತು ನಾಗರ್ ಕೋಯಿಲ್ ಕ್ಷೇತ್ರದಲ್ಲಿ ಎಂ.ಜಿ.ಗಾಂಧಿ ಮುನ್ನಡೆ ಸಾಧಿಸಿದ್ದಾರೆ.

ಥೌಸಂಡ್ ಲೈಟ್ಸ್ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧೆ ನಡೆಸಿದ್ದ ನಟಿ ಖುಷ್ಬೂ ಸುಂದರ್ ಅವರು ಹಿನ್ನಡೆಯಲ್ಲಿದ್ದಾರೆ. ಡಿಎಂಕೆ ಅಭ್ಯರ್ಥಿ ಇಲ್ಲಿ ಹೆಚ್ಚು ಮತ ಗಳಿಸಿದ್ದಾರೆ.

Comments are closed.