ರಾಷ್ಟ್ರೀಯ

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ 50 ರೂ ಏರಿಕೆ ಕಂಡ ಎಲ್​ಪಿಜಿ ಗ್ಯಾಸ್ ಸಿಲಿಂಡರ್​ನ ಬೆಲೆ

Pinterest LinkedIn Tumblr

ಬೆಂಗಳೂರು: ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವಂತೆಯೇ ಜನಸಾಮಾನ್ಯನಿಗೆ ಇದೀಗ ಅಡುಗೆ ಅನಿಲವೂ ದುಬಾರಿಯಾಗುತ್ತಿದೆ. ಎಲ್​ಪಿಜಿ ಗ್ಯಾಸ್ ಸಿಲಿಂಡರ್​ನ ಬೆಲೆ 50 ರೂ ಏರಿಕೆ ಮಾಡಲಾಗಿದೆ.

ನಿನ್ನೆ ಭಾನುವಾರ ದರ ಪರಿಷ್ಕರಣೆ ಆಗಿದ್ದು, ಇವತ್ತು ಸೋಮವಾರದಿಂದ ಹೊಸ ದರ ಅನ್ವಯವಾಗಲಿದೆ. ಒಂದೇ ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆ ಕಂಡಿದೆ. ಫೆ. 4ರಂದು 25 ರೂ ಬೆಲೆ ಏರಿಕೆ ಆಗಿತ್ತು. ಇದೀಗ ಈ ತಿಂಗಳು ಒಟ್ಟಾರೆಯಾಗಿ 75 ರೂಪಾಯಿ ಬೆಲೆ ಏರಿಕೆಯಾಗಿದೆ. ಸಬ್ಸಿಡಿರಹಿತ 14.2 ಕಿಲೋ ತೂಕದ ಅಡುಗೆ ಅನಿಲದ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ ಇದೀಗ 722ರಿಂದ 772 ರೂಪಾಯಿಗೆ ಏರಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಸ್ಥಳೀಯ ತೆರಿಗೆಯಲ್ಲಿನ ವ್ಯತ್ಯಾಸದಿಂದಾಗಿ ಬೆಲೆಯಲ್ಲೂ ಅಲ್ಪಸ್ವಲ್ಪ ವ್ಯತ್ಯಯವಾಗುತ್ತದೆ. ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ 769 ರೂ ಇದೆ.

ಡಿಸೆಂಬರ್ ತಿಂಗಳಲ್ಲೂ ಎರಡು ಬಾರಿ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿತ್ತು. ನವೆಂಬರ್​ನಲ್ಲಿ ಬೆಂಗಳೂರಿನಲ್ಲಿ ಒಂದು ಅಡುಗೆ ಅನಿಲ ಸಿಲಿಂಡರ್ ಬೆಲೆ 597 ರೂ ಇತ್ತು. ಇದೀಗ 175 ರೂ ಬೆಲೆ ಏರಿಕೆ ಕಂಡಿದೆ.

ಸರ್ಕಾರ ಪ್ರತೀ ತಿಂಗಳೂ ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್​ಗಳ ಬೆಲೆ ಪರಿಷ್ಕರಣೆ ಮಾಡುತ್ತದೆ. ಒಬ್ಬ ಎಲ್​ಪಿಜಿ ಗ್ರಾಹಕ ಪ್ರತೀ ವರ್ಷ 12 ಗ್ಯಾಸ್ ಸಿಲಿಂಡರ್​ಗಳಿಗೆ ಸಬ್ಸಿಡಿ ಪಡೆಯುವ ಅವಕಾಶ ಇದೆ. 12ಕ್ಕಿಂತ ಹೆಚ್ಚು ಸಿಲಿಂಡರ್​ಗೆ ಸಬ್ಸಿಡಿ ಸಿಗುವುದಿಲ್ಲ.

Comments are closed.