ಗಲ್ಫ್

ಬಂಟ್ಸ್ ಬಹರೈನ್ ನ ಕೊಲ್ಲಿ ರಾಷ್ಟ್ರದ “ಗಾನಕೋಗಿಲೆ 2020” ವಿಜೇತರಿಗೆ ಬಹುಮಾನ ವಿತರಣೆ

Pinterest LinkedIn Tumblr

ದುಬೈ : ಬಂಟ್ಸ್ ಬಹರೈನ್ ಇದರ ವತಿಯಿಂದ ಬಹರೈನ್,ಸೌದಿ ಅರೇಬಿಯಾ, ಯುಎಇ,ಕುವೈಟ್‌, ಕತಾರ್ ಮತ್ತು ಓಮನ್ ರಾಷ್ಟ್ರಗಳಿಗೆ ಸೀಮಿತವಾಗಿ ಕರೋನ ಮಹಾ ಮಾರಿಯ ಸಮಯದಲ್ಲಿ ಅಂತರ್ಜಾಲ ಮೂಲಕ ಏರ್ಪಾಡಿಸಿದ “ಗಾನಕೋಗಿಲೆ 2020” ಸಂಗಿತ ಕಾರ್ಯಕ್ರಮದ ವಿಜೇತರ ಆಯ್ಕೆ ನಡೆಯಿತು.

14 ವರ್ಷ ಹಾಗೂ ಮೇಲ್ಪಟ್ಟವರಲ್ಲಿ ವಿಜೇತರಾಗಿ ಪ್ರಥಮ ವೈಷ್ಣವಿ ಅರುಣ್ ಶೆಟ್ಟಿ (ದುಬೈ), ದ್ವಿತೀಯ ಕಿಶನ್ ಶೆಟ್ಟಿ (ಮಸ್ಕತ್),ತೃತೀಯ ವಿಜೇತರಾಗಿ ದೀಕ್ಷ ಶೆಟ್ಟಿ (ದುಬೈ) ಹಾಗು ಧನ್ಯ ಅಡಪ (ಕತಾರ್) ಮತ್ತು 5 ರಿಂದ 13 ವರ್ಷದ ವಯೋಮಿತಿಯ ಸ್ಪರ್ಧೆಯಲ್ಲಿ ಪ್ರಥಮ ವಿಜೇತರಾಗಿ ಆನ್ವಿ ಶೆಟ್ಟಿ (ಅಬುಧಾಬಿ) ಮತ್ತು ಸನ್ನಿಧಿ ವಿಶ್ವನಾಥ ಶೆಟ್ಟಿ (ದುಬೈ) ದ್ವಿತೀಯ ವಿಜೇತರಾಗಿ ಶೈವಿ ಶೆಟ್ಟಿ(ಮಸ್ಕತ್ ಓಮಾನ್) ಮತ್ತು ಹಿತ ರೀತೆಶ್ ಶೆಟ್ಟಿ (ಮಸ್ಕತ್ ಓಮಾನ್)ಹಾಗು ತೃತೀಯ ಪ್ರಕೃತಿ ಗೋಪಲ್ ಶೆಟ್ಟಿ (ಬಹರೈನ್) ವಿಜೇತರಾಗಿ ಆಯ್ಕೆಗೊಂಡರು.

ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ನಾಡಿನ ಪ್ರಖ್ಯಾತ ಗಾಯಕರಾದ ರವಿಂದ್ರ ಪ್ರಭು ಹಾಗು ಡಾ.ಕಿರಣ್ ಕುಮಾರ್ ಗಾನಸಿರಿ ಪುತ್ತೂರು ಸಹಕರಿಸಿದರು. ಬಂಟ್ಸ್ ಬಹರೈನ್ ನ ಅದ್ಯಕ್ಷರಾದ ಮೋಹನದಾಸ್ ರೈ ಹಾಗೂ ಸಂಘದ ಪದಾಧಿಕಾರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡ ಸ್ಪರ್ಧಿಗಳಿಗೆ ಹಾಗೂ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.

ದುಬೈಯ ವಿಜೇತರಿಗೆ ಬಹುಮಾನ ವಿತರಣೆ
ದುಬೈಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ನಗರದ ಅಲ್ ಕಿಸಾಸ್ ನ ಫೋರ್ಚುನ್ ಗ್ರ್ಯಾಂಡ್ ಹೊಟೇಲ್ ನಲ್ಲಿ ಸರಳ ಕಾರ್ಯಕ್ರಮದ ಮೂಲಕ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಫೋರ್ಚುನ್ ಗ್ರೂಪ್ ಅಫ್ ನ ಆಡಳಿತ ನಿರ್ದೇಶಕರು, ಯುಎಇ ತುಳು ಕನ್ನಡಿಗರ ಮಹಾ ಪೋಷಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು.

ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ
ಮಾತನಾಡುತ್ತಾ……
” ಬಹರೈನ್ ಬಂಟರ ಸಂಘದ ವತಿಯಿಂದ ಕರೋನ ರೋಗದ ಲಾಕ್ ಡೌನ್ ಸಂದರ್ಭದಲ್ಲಿ ಅಯೊಜಿಸಿದ ಗಾನಕೋಗಿಲೆ 2020 ಸ್ಪರ್ಧಾ ಕಾರ್ಯಕ್ರಮವು ಸಂಗೀತ ಪ್ರೇಮಿಗಳಿಗೆ ಪ್ರೋತ್ಸಾಹದಾಯಕ.ಈ ಸ್ಪರ್ಧೆಯಲ್ಲಿ ಕೊಲ್ಲಿ ರಾಷ್ಟ್ರದ ಬಂಟ ಮಕ್ಕಳಿಗೆ ಹಿರಿಯರಿಗೆ ಈ ಸ್ಪರ್ದೆ ಭಾಗವಹಿಸುವ ಅವಕಾಶ ಮಾಡಿ ಕೊಟ್ಟ ಬಂಟರ ಸಂಘಕ್ಕೆ ಅಭಿನಂದನೆಗಳು. ದುಬೈಯ ವಿಜೇತರಾದ ಸ್ಪರ್ಧಿಗಳಿಗೆ ನಾನು ಬಹರೈನ್ ಬಂಟರ ಸಂಘದ ಪರವಾಗಿ ಪ್ರಶಸ್ತಿ ನೀಡುತಿರುವುದು ನನಗೆ ಸಂತೋಷದ ವಿಷಯ.ಇನ್ನೂ ಮುಂದೆಯೂ ಕೂಡ ಇಂತಹ ಕಾರ್ಯಕ್ರಮಗಳು ನಡೆಸುತ್ತ ಬರಲಿ ಹಾಗೂ ನಮ್ಮ ಬಂಟರ ಮಕ್ಕಳು ಇಂತಹ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಲಿ” ಎಂದು ಹಾರೈಸಿ ಬಹರೈನ್ ಬಂಟರ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು.

14 ವರ್ಷ ಹಾಗು ಮೇಲ್ಪಟ್ಟ ವಯೋಮಿತಿಯ ಪ್ರಥಮ ವಿಜೇತರಾದ ದುಬೈಯ ವೈಷ್ಣವಿ ಅರುಣ್ ಶೆಟ್ಟಿ,ತೃತೀಯ ವಿಜೇತರಾದ ದೀಕ್ಷ ಶೆಟ್ಟಿ ದುಬೈ ಹಾಗೂ ಐದರಿಂದ ಹದಿಮೂರು ವರ್ಷಗಳ ವಯೋಮಿತಿಯ ಪ್ರಥಮ ಸನ್ನಿದಿ ವಿಶ್ವನಾಥ ಶೆಟ್ಟಿ ದುಬೈಯವರನ್ನು ಪ್ರವೀಣ್ ಕುಮಾರ್ ಶೆಟ್ಟಿಯವರು ಪ್ರಶಸ್ತಿ ನೀಡಿ ಗೌರವಿಸಿದರು.

ಗಮ್ಮತ್ ಕಲಾವಿದರು ದುಬೈಯ ವಿಶ್ವನಾಥ ಶೆಟ್ಟಿಯವರು ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜನೆಯ ನೇತೃತ್ವವಹಿಸಿದರು.

ಮಸ್ಕತ್ ಓಮಾನ್ ನಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆ….
ಮಸ್ಕತ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 14 ವರ್ಷ ಹಾಗೂ ಮೇಲ್ಪಟ್ಟವರಲ್ಲಿ ವಿಜೇತರಾದ ಕಿಶನ್ ಶೆಟ್ಟಿ ಮಸ್ಕತ್, ಐದರಿಂದ ಹದಿಮೂರು ವರ್ಷದ ವಯೋಮಿತಿಯ ದ್ವಿತೀಯ ವಿಜೇತರಾದ ಶೈವಿ ಶೆಟ್ಟಿ ಮಸ್ಕತ್ ಮತ್ತು ಹಿತ ರೀತೆಶ್ ಶೆಟ್ಟಿ ಮಸ್ಕತ್ ಇವರಿಗೆ ಓಮಾನ್ ಬಂಟರ ಸಂಘದ ಮಹಾ ಪೋಷಕರು, ಮಾರ್ಗದರ್ಶಕರಾದ ಶಶಿಧರ್ ಶೆಟ್ಟಿ ಮಲ್ಲಾರ್ ಮತ್ತು ಭಾರತೀಯ ಸಾಮಾಜಿಕ ವೇದಿಕೆಯ ತುಳು ವಿಭಾಗದ ಅಧ್ಯಕ್ಷ ರಮಾನಂದ ಎಂ ಶೆಟ್ಟಿ ಓಮಾನ್ ಇವರು ಪ್ರಶಸ್ತಿ ನೀಡಿ ಗೌರವಿಸಿದರು.

Comments are closed.