ರಾಷ್ಟ್ರೀಯ

ಕೋವಿಡ್‌- 19 ಲಸಿಕೆ ನೋಂದಾಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ

Pinterest LinkedIn Tumblr

ನವದೆಹಲಿ: ಕೋವಿಡ್‌- 19 ಲಸಿಕೆ ಅಪ್ಲಿಕೇಶನ್‌ ನೋಂದಾಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು ಮಾಹಿತಿ ನೀಡಿದ್ದಾರೆ.

Co-WIN ಪೋರ್ಟಲ್ ಬಗ್ಗೆ ವಿವರಗಳನ್ನ ಒದಗಿಸಿರುವ ಅವರು, ಇದನ್ನ ಭಾರತ ಸರ್ಕಾರದ ಆರೋಗ್ಯ ಸಚಿವಾಲಯ, ಯುನೈಟೆಡ್ ನೇಷನ್ಸ್ ಡೆವಲಪ್ ಮೆಂಟ್ ಪ್ರೋಗ್ರಾಮ್ (ಯುಎನ್ ಡಿಪಿ), ಇಂಡಿಯಾ ಆಫೀಸ್ ನ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಕೋ-ವಿನ್ Co-WIN ಪೋರ್ಟಲ್ ಬಗ್ಗೆ ವಿವರಗಳನ್ನ ಒದಗಿಸಿರುವ ಅವರು, ಇದನ್ನ ಭಾರತ ಸರ್ಕಾರದ ಆರೋಗ್ಯ ಸಚಿವಾಲಯ, ಯುನೈಟೆಡ್ ನೇಷನ್ಸ್ ಡೆವಲಪ್ ಮೆಂಟ್ ಪ್ರೋಗ್ರಾಮ್ (UNDP), ಇಂಡಿಯಾ ಆಫೀಸ್ ನ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಅಪ್ಲಿಕೇಶನ್‌ʼನಲ್ಲಿ ನೋಂದಣಿ ಮಾಡಲು ಆಧಾರ್ ಕಡ್ಡಾಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಲ್ಲ, ಕೋ-ವಿನ್ ಪೋರ್ಟಲ್ʼನಲ್ಲಿ ನೋಂದಣಿಗೆ ಆಧಾರ್ ಕಡ್ಡಾಯವಲ್ಲ’ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಅಪ್ಲಿಕೇಶನ್ʼನ್ನ ಅಭಿವೃದ್ಧಿಪಡಿಸಲು ಯಾವುದೇ ಗೌಪ್ಯತೆ ಪರಿಣಾಮ ಮೌಲ್ಯಮಾಪನಗಳನ್ನು ನಡೆಸಲಾಗಿದೆಯೇ ಎಂಬ ಪ್ರಶ್ನೆಗೆ ಸಚಿವರು, ‘ಹೌದು, ಗೌಪ್ಯತೆ ಪರಿಣಾಮ ಮೌಲ್ಯಮಾಪನಗಳನ್ನ ಕೋ-ವಿನ್ ಪೋರ್ಟಲ್‌ ಗಾಗಿ ನಡೆಸಲಾಯಿತು. ಡೇಟಾ ಸುರಕ್ಷತೆಗಾಗಿ, ಅತ್ಯಂತ ಸುರಕ್ಷಿತ ಕೀಲಿಯನ್ನ ಬಳಸಿ ಡೇಟಾವನ್ನ ಗೂಢಲಿಪೀಕರಿಸಲಾಗಿದೆ ಎಂದರು.

AWS ಸರ್ವರ್ʼನಲ್ಲಿ ಡೇಟಾಬೇಸ್ʼಗೆ ಯಾವುದೇ ಅನಧಿಕೃತ ಪ್ರವೇಶವನ್ನ ಅನುಮತಿಸುವುದಿಲ್ಲ ಮತ್ತು ಸಂಬಂಧಿತ ಡೇಟಾಬೇಸ್ ಸೇವೆಗೆ (ದುರುದ್ದೇಶಪೂರಿತ ಚಟುವಟಿಕೆಗಳ ಅಪಾಯವನ್ನು ಕಡಿಮೆ ಮಾಡಲು) ನಿರ್ಬಂಧಿಸಲಾಗಿದೆ.’ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ (ಎನ್ ಡಿಎಚ್ ಎಂ) ನಲ್ಲಿ ಹೇಳಿದಂತೆ ಕೋ-ವಿನ್ ಅಪ್ಲಿಕೇಶನ್ ಗೌಪ್ಯತೆ ನೀತಿಯನ್ನ ಅನುಸರಿಸುತ್ತೆ ಎಂದರು.

Comments are closed.