ರಾಷ್ಟ್ರೀಯ

ಕೋವಿಶೀಲ್ಡ್​ ಕೊರೋನಾ ಲಸಿಕೆ ದೇಶದಲ್ಲೆಡೆ ರವಾನೆ !

Pinterest LinkedIn Tumblr

ಪುಣೆ: ಕೊರೋನಾ ವೈರಸ್​ಗಾಗಿ ಕಂಡು ಹಿಡಿಯಲಾದ ಕೋವಿಶೀಲ್ಡ್​ ಲಸಿಕೆಯನ್ನು ದೇಶದ ಜನರಿಗೆ ನೀಡುವ ಉದ್ದೇಶದಿಂದ ಪುಣೆಯಲ್ಲಿರುವ ಸೀರಮ್​ ಇನ್ಸ್​ಟಿಟ್ಯೂಟ್​ನಿಂದ ಈ ಲಸಿಕೆ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಅಲ್ಲಿಂದ ಇಡೀ ರಾಷ್ಟ್ರಕ್ಕೆ ಪೂರೈಕೆಯಾಗುತ್ತದೆ ಎನ್ನಲಾಗುತ್ತಿದೆ.

ಈ ಮಹತ್ವದ ಲಸಿಕೆ ಕಾರ್ಯಕ್ರಮಕ್ಕೂ ಮುನ್ನವೇ ಕೇಂದ್ರ ಸರ್ಕಾರ ಈ ಕೋವಿಶೀಲ್ಡ್​ ಲಸಿಕೆಯನ್ನು ಹಲವು ರಾಜ್ಯಗಳಲ್ಲಿ ಮೂರು ಸುತ್ತಿನ ಡ್ರೈರನ್​ ಮೂಲಕವೂ ಜನರಿಗೆ ನೀಡಿ ಪರೀಕ್ಷಿಸಿತ್ತು. ಅದರಲ್ಲಿ ಯಶಸ್ಸನ್ನು ಸಾಧಿಸಿತ್ತು.

ರಾಷ್ಟ್ರವ್ಯಾಪಿ ಇನಾಕ್ಯುಲೇಷನ್ ಡ್ರೈವ್ ಉಡಾವಣೆಗೆ ಇನ್ನೂ ಕೇವಲ ನಾಲ್ಕು ದಿನಗಳಷ್ಟೇ ಇದ್ದು, ತಾಪಮಾನ-ನಿಯಂತ್ರಿತ ಮೂರು ಟ್ರಕ್‌ಗಳು ಪುಣೆ ಸೀರಮ್ ಇನ್‌ಸ್ಟಿಟ್ಯೂಟ್ ಗೇಟ್‌ಗಳಿಂದ ಇಂದು ಬೆಳಿಗ್ಗೆ 5 ಗಂಟೆಗೆ ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿವೆ. ಅಲ್ಲಿಂದ ಭಾರತದಾದ್ಯಂತ ಲಸಿಕೆಗಳನ್ನು ಪೂರೈಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪ್ರತಿ ಟ್ರಕ್​ಗಳಲ್ಲಿ 478 ಪೆಟ್ಟಿಗೆಗಳಿದ್ದು, ಪ್ರತಿ ಪೆಟ್ಟಿಗೆ 32 ಕೆಜಿ ತೂಕವಿರುತ್ತದೆ ಎಂದು ಲಸಿಕೆ ಸಾರಿಗೆ ವ್ಯವಸ್ಥೆಯಲ್ಲಿ ತೊಡಗಿರುವ ಮೂಲಗಳು ಪಿಟಿಐಗೆ ತಿಳಿಸಿವೆ. ಟ್ರಕ್‌ಗಳು ಮಂಜರಿಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆವರಣದಿಂದ ಹೊರಟು ವಿಮಾನ ನಿಲ್ದಾಣವನ್ನು ತಲುಪಿದ್ದು, ವಿಮಾನ ನಿಲ್ದಾಣದಿಂದ ಲಸಿಕೆಗಳನ್ನು ಬೆಳಿಗ್ಗೆ 10 ಗಂಟೆಯ ಒಳಗೆ ದೇಶದಾದ್ಯಂತ 13 ಸ್ಥಳಗಳಿಗೆ ರವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪುಣಿಯಿಂದ ಈ ಕೋವಿಶೀಲ್ಡ್ ಲಸಿಕೆಗಳನ್ನು ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನೂಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಕ್ನೋ, ಚಂಡೀಗಢ ಮತ್ತು ಭುವನೇಶ್ವರ ರಾಜ್ಯಗಳಿಗೆ ರವಾನಿಸಲಾಗಿದೆ. ಎರಡು ಸರಕು ವಿಮಾನಗಳು ಸೇರಿದಂತೆ ಎಂಟು ವಾಣಿಜ್ಯ ವಿಮಾನಗಳಲ್ಲಿ ಲಸಿಕೆಗಳನ್ನು ಪುಣೆಯಿಂದ ಈ ಎಲ್ಲಾ ರಾಜ್ಯಗಳಿಗೆ ಪೂರೈಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮೊದಲ ಸರಕು ಹಾರಾಟವು ಹೈದರಾಬಾದ್, ವಿಜಯವಾಡ, ಮತ್ತು ಭುವನೇಶ್ವರವನ್ನು ತಲುಪಿದರೆ, ಎರಡನೇ ಸರಕು ಹಾರಾಟವು ಕೋಲ್ಕತಾ ಮತ್ತು ಗುವಾಹಟಿಗೆ ತೆರಳಿದೆ. ಇನ್ನೂ ಮುಂಬೈ ರಾಜ್ಯಕ್ಕೆ ರಸ್ತೆ ಮೂಲಕವೇ ಲಸಿಕೆಯನ್ನು ಪೂರೈಸಲಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್‌ನಿಂದ ಲಸಿಕೆ ದಾಸ್ತಾನು ಸಾಗಿಸಲು ಕೂಲ್-ಎಕ್ಸ್ ಕೋಲ್ಡ್ ಚೈನ್ ಲಿಮಿಟೆಡ್‌ಗೆ ಸೇರಿದ ಟ್ರಕ್‌ಗಳನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.

Comments are closed.