ಕರಾವಳಿ

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ಈ ಬಾರಿ ಭಕ್ತರಿಗೆ ಗೆಂಡಸೇವೆಗೆ ಅವಕಾಶವಿಲ್ಲ..!

Pinterest LinkedIn Tumblr

ಕುಂದಾಪುರ: ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಮಕರ ಸಂಕ್ರಮಣ ಉತ್ಸವ ಜನವರಿ 14ರಿಂದ 16 ರ ತನಕ ಕೋವಿಡ್ ನಿಯಮಾವಳಿಯಂತೆ ಸರಳವಾಗಿ ಹಾಗೂ ಸಂಪ್ರದಾಯಬದ್ಧವಾಗಿ ನಡೆಯಲಿದೆ.

ಪ್ರತಿವರ್ಷ ಮಕರ ಸಂಕ್ರಮಣದಂದು ನಡೆಯುವ ಗೆಂಡಸೇವೆಯಲ್ಲಿ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಸಹಸ್ರಾರು ಭಕ್ತರು ಪಾಲ್ಘೊಳ್ಳುತ್ತಿದ್ದು ಈ ಬಾರಿ ಕೊರೋನಾ ಹಿನ್ನೆಲೆ ಭಕ್ತಾಧಿಗಳಿಗೆ ಗೆಂಡಸೇವೆಗೆ ಅವಕಾಶವಿಲ್ಲ. ಗುರುವಾರ ಮಧ್ಯಾಹ್ನ ಸನ್ನಿಧಿಯಲ್ಲಿ ನಡೆಯುವ ಮಹಾಮಂಗಳಾರತಿ ಈ ಬಾರಿ ಬೆಳಿಗ್ಗೆ 8.30ಕ್ಕೆ ನಡೆಯಲಿದೆ. ಹೊರಗಿನಿಂದ ಬರುವ ಅಂಗಡಿಗಳಿಗೆ ಅವಕಾಶವಿಲ್ಲ.

ಹೆಮ್ಮಾಡಿ ಸೇವಂತಿಗೆ ದೇವರಿಗೆ ಅರ್ಪಿಸುವುದು ಸಂಪ್ರದಾಯವಾದ್ದರಿಂದ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಅನ್ನದಾನವು ಕೂಡ ಸಾಮಾಜಿಕ ಅಂತರ ಪಾಲನೆಯೊಂದಿಗೆ ನಡೆಯಲಿದೆ. ಗೆಂಡ ಸೇವೆ ಹೊರತುಪಡಿಸಿ ಇತರ ಕೆಲ ಸೇವೆಗಳು ಸಾಂಪ್ರದಾಯಿಕವಾಗಿ ನಡೆಯಲಿದೆ.

ದೇವಳಕ್ಕೆ ಆಗಮಿಸುವ ಭಕ್ತರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.