ಅಂತರಾಷ್ಟ್ರೀಯ

ಅನಿವಾಸಿ ಭಾರತೀಯರಿಗೆ ಮತದಾನದ ಅವಕಾಶಕ್ಕೆ ವಿದೇಶಾಂಗ ಇಲಾಖೆ ಒಪ್ಪಿಗೆ

Pinterest LinkedIn Tumblr

ನವದೆಹಲಿ: ಭಾರತೀಯ ಚುನಾವಣೆಗಳಲ್ಲಿ ಪಾಲ್ಗೊಳ್ಳಲು ದೂರದ ದೇಶಗಳಲ್ಲಿರುವ ಅನಿವಾಸಿ ಭಾರತೀಯರಿಗೆ ಅವಕಾಶ ಮಾಡಿಕೊಡಬೇಕೆನ್ನುವ ಚುನಾವಣಾ ಆಯೋಗದ ಪ್ರಸ್ತಾಪಕ್ಕೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ಸಮ್ಮತಿ ಸೂಚಿಸಿದೆ.

ಇದೇ ವೇಳೆ, ಈ ಸೌಲಭ್ಯವನ್ನು ಜಾರಿಗೆ ತರುವ ಮುನ್ನ ಸಂಬಂಧಿಸಿದವರ ಜೊತೆ ಸಮಾಲೋಚನೆ ನಡೆಸಬೇಕೆಂದೂ ಆಯೋಗಕ್ಕೆ ಸಲಹೆ ನೀಡಿದೆ.

ಪೋಸ್ಟಲ್ ಬ್ಯಾಲಟ್ ಮೂಲಕ ಎನ್​ಆರ್​ಐಗಳು ಮತಚಲಾಯಿಸಲು ಅನುವು ಮಾಡಿಕೊಡುವಂತೆ 1961ರ ಚುನಾವಣಾ ಆಯೋಜನೆಯ ನಿಯಮಾವಳಿಗೆ ತಿದ್ದುಪಡಿ ತರಲು ಚುನಾವಣಾ ಆಯೋಗ ನವೆಂಬರ್ 27ರಂದು ಕೇಂದ್ರ ಕಾನೂನು ಇಲಾಖೆ ಕಾರ್ಯದರ್ಶ ಅವರಿಗೆ ಮನವಿ ಮಾಡಿ ಪತ್ರ ಬರೆದಿತ್ತು. ಮುಂಬರುವ ಅಸ್ಸಾಮ್, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲೇ ಇ-ಮತದಾನಕ್ಕೆ ಏರ್ಪಾಡು ಮಾಡಲು ಸಾಧ್ಯ, ಹಾಗು ತಾನು ಸಿದ್ಧ ಎಂದು ಆಯೋಗ ಹೇಳಿದೆ.

ಚುನಾವಣೆಯ ವೇಳೆ ಬೇರೆ ಬೇರೆ ಕಾರಣಕ್ಕೆ ಭಾರತಕ್ಕೆ ಬಂದು ಮತಚಲಾಯಿಸಲು ಸಾಧ್ಯವಾಗುತ್ತಿಲ್ಲ. ತಮಗೆ ಅಂಚೆ ಮತಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅನಿವಾಸಿ ಭಾರತೀಯ ಸಮುದಾಯದ ಹಲವರಿಂದ ತಮಗೆ ಮನವಿ ಬರುತ್ತಿದೆ ಎಂದು ಚುನಾವಣಾ ಆಯೋಗ ತನ್ನ ಪತ್ರದಲ್ಲಿ ಪ್ರಸ್ತಾಪಿಸಿದೆ.

ಮತದಾನದ ವ್ಯವಸ್ಥೆ ಹೇಗೆ?

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಇ-ಮತದಾನಕ್ಕೆ ಫಾರ್ಮ್-16 ಬಳಕೆಯಾಗಲಿದೆ. ಚುನಾವಣೆಯ ನೋಟಿಫಿಕೇಶನ್ ಬಂದು ಕನಿಷ್ಠ ಐದು ದಿನದ ನಂತರ ಫಾರ್ಮ್-16 ಅರ್ಜಿ ನಮೂನೆ ಭರ್ತಿ ಮಾಡಿ ಎನ್​ಆರ್​ಐಗಳು ರಿಟರ್ನಿಂಗ್ ಆಫಿಸರ್​ಗೆ ಆನ್​ಲೈನ್ ಮೂಲಕ ಕಳುಹಿಸಬೇಕು. ನಂತರ ಮತಮತ್ರವನ್ನ ಭರ್ತಿ ಮಾಡಿ ಚುನಾವಣಾ ಅಧಿಕಾರಿಯಿಂದ ಪ್ರಮಾಣಿತಗೊಂಡು ತಮ್ಮ ಕ್ಷೇತ್ರದ ರಿಟರ್ನಿಂಗ್ ಆಫೀಸರ್​ಗೆ ಪೋಸ್ಟ್ ಮೂಲಕ ಕಳುಹಿಸಬೇಕು. ಮತ ಎಣಿಕೆಯ ದಿನದಂದು ಬೆಳಗ್ಗೆ 8 ಗಂಟೆ ಒಳಗೆ ಇದು ತಲುಪುವಂತೆ ನೋಡಿಕೊಳ್ಳಬೇಕು ಎನ್ನಲಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಇ-ಅಂಚೆ ಮತದಾನದ (ETPBS) ಸೌಲಭ್ಯ ಭಾರತದಲ್ಲಿ ಹಲವರಿಗೆ ನೀಡಲಾಗಿದೆ. ಸೇನಾಪಡೆ, ಅರೆ ಸೇನಾಪಡೆ ಸಿಬ್ಬಂದಿ ಹಾಗೂ ವಿದೇಶಗಳಲ್ಲಿರುವ ಭಾರತೀಯ ಸರ್ಕಾರಿ ನೌಕರರು ಇ-ಮತದಾನದ ಅವಕಾಶ ಹೊಂದಿದ್ಧಾರೆ. ಈಗ ಮುಂದೆ ಅನಿವಾಸಿ ಭಾರತೀಯರೂ ಚುನಾವಣೆಯಲ್ಲಿ ಪಾಲ್ಗೊಂಡು ಮತ ಹಕ್ಕು ಚಲಾಯಿಸುವ ಅವಕಾಶ ಹೊಂದುವ ಸಾಧ್ಯತೆ ದಟ್ಟವಾಗಿದೆ.

Comments are closed.