ರಾಷ್ಟ್ರೀಯ

ನೇಣು ಬೀಗಿದ ಶೈಲಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಹೆಣವಾದಳು!

Pinterest LinkedIn Tumblr


ಭೋಪಾಲ್​: ಸೆಲ್ಫಿ ಕ್ರೇಜ್​ ಎಷ್ಟೋ ಜನರು ಜೀವವನ್ನೇ ಕಳೆದುಕೊಳ್ಳುವಂತೆ ಮಾಡಿರುವ ಅನೇಕ ಸುದ್ದಿಗಳನ್ನು ಕೇಳಿದ್ದೀರಿ. ಇದೀಗ ಅಂತದ್ದೇ ಒಂದು ಕಥೆ ಮಧ್ಯಪ್ರದೇಶದ ಇಂದೋರ್​ನಲ್ಲಿ ವರದಿಯಾಗಿದೆ. 12 ವರ್ಷದ ಬಾಲಕಿಯೊಬ್ಬಳು ನೇಣು ಹಾಕಿಕೊಂಡವರ ರೀತಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಂಡಿದ್ದಾಳೆ.

ಇಂದೋರ್​ನ ವೈಷ್ಣೋದೇವಿ ನಗರದಲ್ಲಿ ಇಂತಹ ಘಟನೆ ನಡೆದಿದೆ. 12 ವರ್ಷದ ಬಾಲಕಿ ಅಪ್ಪನೊಂದಿಗೆ ಮನೆಯಲ್ಲಿದ್ದಳು. ಇತ್ತೀಚೆಗೆ ರೂಂ ಸೇರಿಕೊಂಡ ಬಾಲಕಿ ಸೆಲ್ಫಿ ತೆಗೆದುಕೊಳ್ಳಲು ಆರಂಭಿಸಿದ್ದಾಳೆ. ನೇಣು ಕಟ್ಟಿ, ಕುರ್ಚಿ ಮೇಲೆ ನಿಂತು ನೇಣು ಹಾಕಿಕೊಂಡವರಂತೆ ಸೆಲ್ಫಿ ತೆಗೆದುಕೊಂಡಿದ್ದಾಳೆ. ಕುರ್ಚಿಯಿಂದ ಇಳಿಯಲು ಹೊರಟಾಗ ಆಕೆಯ ಕಾಲು ಜಾರಿದ್ದು, ಕುರ್ಚಿ ಬಿದ್ದಿದೆ. ಬಾಲಕಿಯ ಕುತ್ತಿಗೆಯಲ್ಲಿದ್ದ ನೇಣು ಎಳೆದು, ಆಕೆಯ ಉಸಿರು ನಿಂತು ಹೋಗಿದೆ.

ತುಂಬಾ ಹೊತ್ತಾದರೂ ಮಗಳು ಕೋಣೆಯಿಂದ ಹೊರಗೆ ಬಾರದಿದ್ದನ್ನು ಕಂಡ ತಂದೆಗೆ ಗಾಬರಿಯಾಗಿದೆ. ಕೋಣೆಯ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಮಗಳ ಮೃತ ದೇಹ ನೇಣಿನಲ್ಲಿ ನೇತಾಡುತ್ತಿರುವುದು ಕಂಡಿದೆ. ತಕ್ಷಣ ಅಕ್ಕ ಪಕ್ಕದ ಮನೆಯವರನ್ನು ಕರೆದು, ಅವರ ಸಹಾಯದಿಂದ ಮಗಳ ದೇಹವನ್ನು ಕೆಳಕ್ಕಿಳಿಸಲಾಗಿದೆ. ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಇದು ಸೆಲ್ಫಿಯಿಂದಾದ ಅನಾಹಿತದಂತೆ ಕಂಡಿದೆ. ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.