ನಾಗಪುರ: ಹಿರಿಯ ಆರ್ ಎಸ್ ಎಸ್ ವಿಚಾರವಾದಿ ಮತ್ತು ಸಂಸ್ಥೆಯ ಮೊದಲ ವಕ್ತಾರ ಮಾಧವ್ ಗೋವಿಂದ್ ವೈದ್ಯ 97 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಇಂದು (ಶನಿವಾರ) ಮಧ್ಯಾಹ್ನ 3-35ರ ಸುಮಾರಿಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಜಿ ವೈದ್ಯ ಕೊನೆಯುಸಿರೆಳೆದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಇತ್ತಿಚೀಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಎಂಜಿ ವೈದ್ಯ ಬಳಿಕ ಚೇತರಿಸಿಕೊಂಡಿದ್ದರು. ಆದಾಗ್ಯೂ, ಶುಕ್ರವಾರ ಇದ್ದಕ್ಕಿದ್ದಂತೆ ಆರೋಗ್ಯ ಕ್ಷೀಣಿಸಿದ್ದು, ಇಂದು ಮೃತಪಟ್ಟಿರುವುದಾಗಿ ಅವರ ಮೊಮ್ಮಗ ವಿಷ್ಣು ವೈದ್ಯ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.