ರಾಷ್ಟ್ರೀಯ

ಬಿಜೆಪಿ ಸೇರ್ಪಡೆಗೆ ಸಿದ್ಧರಾಗಿ, ಒಂದೇ ದಿನದಲ್ಲಿ ನಿಲುವು ಬದಲಾಯಿಸಿದ ತೃಣಮೂಲ ಕಾಂಗ್ರೆಸ್ ಶಾಸಕ

Pinterest LinkedIn Tumblr


ಕೊಲ್ಕತ್ತ: ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ತ್ಯಜಿಸಿದ ಒಂದೇ ದಿನದಲ್ಲಿ ಶಾಸಕ ಜಿತೇಂದ್ರ ತಿವಾರಿ ತಮ್ಮ ನಿಲುವು ಬದಲಿಸಿದ್ದಾರೆ.

ಟಿಎಂಸಿ ತೊರೆದಿರುವ ಜಿತೇಂದ್ರ ತಿವಾರಿ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಬಿಜೆಪಿ ಸೇರ್ಪಡೆ ಬಗ್ಗೆ ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೊ ಅವರು ಅನುಮಾನ ವ್ಯಕ್ತಪಡಿಸಿದ್ದೂ ಅಲ್ಲದೇ, ತಿವಾರಿ ಅವರನ್ನು ಪಕ್ಷಕ್ಕೆ ಆಹ್ವಾನಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಿವಾರಿ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ.

ಗುರುವಾರ ಟಿಎಂಸಿ ತೊರೆದಿದ್ದ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ಅವರನ್ನೇ ಅನುಸರಿಸಿದ್ದ ಅಸನ್ಸೋಲ್‌ ಪಾಲಿಕೆಯ ಮಾಜಿ ಮುಖ್ಯಸ್ಥರೂ ಆಗಿರುವ ತಿವಾರಿ ಗುರುವಾರ ಶಾಸಕತ್ವ ತೊರೆದು, ಪಕ್ಷ ಬಿಟ್ಟಿದ್ದರು.

ತಿವಾರಿ ಬಿಜೆಪಿ ಸೇರುವ ಸಾಧ್ಯತೆಗಳನ್ನು ಅವರ ಆಪ್ತ ವಲಯದ ಮೂಲಗಳು ತಿಳಿಸಿದ್ದವು. ಆದರೆ, ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಮತ್ತು ಬಿಜೆಪಿ ನಾಯಕರು ತಿವಾರಿ ಅವರ ಪಕ್ಷ ಸೇರ್ಪಡೆಗೆ ವಿರೋಧಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಬದಲಾಗಿದೆ.

‘ಪಕ್ಷದ ಹಿರಿಯರು ಏನು ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ಪ್ರತ್ಯೇಕ ವಿಚಾರ. ಆದರೆ, ಈ ಹಿಂದೆ ಬಿಜೆಪಿ ತಳಮಟ್ಟದ ಕಾರ್ಯಕರ್ತರಿಗೆ ‘ಚಿತ್ರ ಹಿಂಸೆ’ ನೀಡಿದ್ದ ಟಿಎಂಸಿ ನಾಯಕರು ಪಕ್ಷ ಸೇರದಂತೆ ಮಾಡಲು ತಾವು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ,’ ಎಂದು ಸಚಿವ ಬಾಬುಲ್ ಸುಪ್ರಿಯೊ ಫೇಸ್‌ಬುಕ್‌ನಲ್ಲಿ ವಿಡಿಯೊ ಸಂದೇಶವೊಂದನ್ನು ಪ್ರಕಟಿಸಿದ್ದಾರೆ. ಅಲ್ಲದೆ, ಅಸಾನ್ಸೋಲ್‌ನ ಟಿಎಂಸಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸುಪ್ರಿಯೊ ಅವರು ಚೌಕಾಶಿಯಲ್ಲಿ ತೊಡಗಿದ್ದಾರೆ ಎಂಬ ಮಾತುಗಳನ್ನೂ ಅವರು ನಿರಾಕರಿಸಿದ್ದಾರೆ.

ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಅವರೂ ಸುಪ್ರಿಯೊ ಅವರ ಮಾತುಗಳನ್ನೇ ಬೆಂಬಲಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮ್ಮ ನಿಲುವು ಬದಲಸಿರುವ ಜಿತೇಂದ್ರ ತಿವಾರಿ ಮರಳಿ ಟಿಎಂಸಿ ಕಡೆ ಮುಖ ಮಾಡಿದ್ದಾರೆ. ‘ನಾನು ಬಿಜೆಪಿ ಸೇರುವುದಾಗಿ ಎಲ್ಲಿಯೂ ಹೇಳಿರಲಿಲ್ಲ,’ ಎಂದು ಹೇಳಿದ್ದಾರೆ.

‘ನಾನು ಬಿಜೆಪಿ ಸೇರುತ್ತೇನೆ ಎಂದು ಯಾವಾಗಲೂ ಹೇಳಲಿಲ್ಲ. ಟಿಎಂಸಿ ಮುಖ್ಯಸ್ಥರಾದ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ಮುಖಂಡ ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿ ಮಾಡಲು ನಾನು ಬಯಸುತ್ತೇನೆ. ಏನಾಗುತ್ತದೆ ಎಂದು ನೋಡೋಣ’ ಎಂದು ತಿವಾರಿ ತಿಳಿಸಿದ್ದಾರೆ.

Comments are closed.