ರಾಷ್ಟ್ರೀಯ

ಖ್ಯಾತ ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು​..!

Pinterest LinkedIn Tumblr


ಚೆನ್ನೈ: ತಮಿಳಿನ ಖ್ಯಾತ ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಸಂಬಂಧ ಪತಿ ಹೇಮಂತ್ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಹೇಮಂತ್​​ ಚಿತ್ರಾ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದಾರೆ ಅನ್ನೋ ಆರೋಪದ ಮೇರೆಗೆ ಅವರನ್ನ ಅರೆಸ್ಟ್ ಮಾಡಲಾಗಿದೆ. 28 ವರ್ಷದ ಚಿತ್ರಾ , ಹೇಮಂತ್ ಕುಮಾರ್ ಅವ್ರನ್ನ ಕೆಲವು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ರು. ಅವರಿಬ್ಬರ ನಡುವೆ ಆಗಾಗ ಜಗಳಗಳು ಕೂಡ ಆಗುತಿದ್ವಂತೆ. ಈ ಹಿನ್ನೆಲೆ ಚಿತ್ರಾ ಸಾವಿಗೆ ಪತಿ ಹೇಮಂತ್ ಕುಮಾರ್ ಕಾರಣ ಅಂತ ಚಿತ್ರಾ ತಾಯಿ ಆರೋಪಿಸಿದ್ದಾರೆ.

ಚಿತ್ರಾ ಆತ್ಮಹತ್ಯೆ ಪ್ರಕರಣದ ತನಿಖೆ ಪ್ರಾರಂಭಿಸಿದ ಪೊಲೀಸರು ಹೇಮಂತ್ ಕುಮಾರ್ ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಚಿತ್ರಾ ನಟನೆಯ ಕೆಲವು ದೃಶ್ಯಗಳ ಬಗ್ಗೆ ಹೇಮಂತ್ ಆಕ್ಷೇಪ ವ್ಯಕ್ತಪಡಿಸಿ, ಜಗಳವಾಡಿದ್ದ ಅಂತ ತಿಳಿದುಬಂದಿದೆ. ಚಿತ್ರಾ ಆತ್ಮಹತ್ಯೆ ಮಾಡಿಕೊಂಡ ದಿನ ಕೂಡ ಆಕೆಯ ಮೇಲೆ ಹೇಮಂತ್​​ ಹಲ್ಲೆ ಮಾಡಿದ್ದು, ಕಪಾಳಮೋಕ್ಷ ಮಾಡಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

ಅಂದ್ಹಾಗೇ ಚಿತ್ರಾ ಡಿಸೆಂಬರ್ 9ರಂದು ಚೆನ್ನೈನ ನಜರೆತ್ ಪೆಟ್ಟೈನ ಪಂಚತಾರಾ ಹೋಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ರು. ಈ ಬಗ್ಗೆ ಹೇಮಂತ್​ನ ವಿಚಾರಣೆ ಮಾಡಿದಾಗ, ರಾತ್ರಿ 1 ಗಂಟೆಗೆ ಶೂಟಿಂಗ್​ ಮುಗಿಸಿ ವಾಪಸ್ ಆಗಿದ್ದ ಚಿತ್ರಾ ಸ್ನಾನ ಮುಗಿಸಿ ಬರುವುದಾಗಿ ಹೇಳಿ ಹೋದಳು. ತುಂಬಾ ಸಮಯವಾದರೂ ಬರಲಿಲ್ಲ, ಬಳಿಕ ಬಾಗಿಲು ಬಡಿಯಲು ಪ್ರಾರಂಭಿಸಿದೆ. ಬಾಗಿಲು ತೆಗೆಯದ ಕಾರಣ ಹೋಟೆಲ್ ಸಿಬ್ಬಂದಿಗೆ ತಿಳಿಸಿ ನಕಲಿ ಕೀ ಬಳಸಿ ಬಾಗಿಲು ತೆರೆದೆವು. ಆಗ ಚಿತ್ರಾ ನೇಣುಹಾಕಿಕೊಂಡಿದ್ದಳು ಅಂತ ಹೇಳಿದ್ದಾನೆ.

ಇನ್ನು ಚಿತ್ರ ತಾಯಿ ಹೇಮಂತ್ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ನಾನು ಅವಳನ್ನು ಧೈರ್ಯಶಾಲಿಯಾಗಿ ಬೆಳೆಸಿದ್ದೆ. ಅವಳು ತುಂಬಾ ಪ್ರತಿಭಾವಂತೆ. ಅವಳ ದುಡ್ಡಿಗಾಗಿ ಹೇಮಂತ್ ಚಿತ್ರಾನ ಮದುವೆ ಆಗಿದ್ದ ಅಂತ ನನಗೆ ಅನುಮಾನವಿದೆ. ನನ್ನ ಮಗಳು ದೈಹಿಕ ಹಿಂಸಾಚಾರಕ್ಕೆ ಒಳಗಾಗಿದ್ದಾಳೆ ಅಂತ ನನಗೆ ಅನಿಸುತ್ತೆ. ಅವಳ ಮುಖದ ಮೇಲೆ ಗಾಯದ ಗುರುತುಗಳಿವೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ…

Comments are closed.