ರಾಷ್ಟ್ರೀಯ

ಸಿಆರ್‌ಪಿಎಫ್‌ ಯೋಧರ ಸಾಹಸ ಕುರಿತ ಕೃತಿ ಬಿಡುಗಡೆಗೊಳಿಸಿದ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ

Pinterest LinkedIn Tumblr


ನವದೆಹಲಿ: ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ತನ್ನ ಪಡೆಯ ವೀರ ಹುತಾತ್ಮ, ಧೈರ್ಯಶಾಲಿ 13 ಯೋಧರ ಸಾಹಸ ಕುರಿತಾದ ‘ದಿ ಶೌರ್ಯ ಅನ್‌ಬಾಂಡ್‌’ ಎಂಬ ಕೃತಿಯನ್ನು ಹೊರತಂದಿದೆ. ಈ ವಿಶೇಷ ಕೃತಿಯು 2001ರಲ್ಲಿ ಸಂಸತ್‌ ಭವನ ದಾಳಿ ವೇಳೆ ಹುತಾತ್ಮರಾದ ಕಮಲೇಶ್‌ ಕುಮಾರಿ ಅವರ ಜೀವನಗಾಥೆಯನ್ನೂ ಒಳಗೊಂಡಿದೆ.

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಭಾನುವಾರ ಈ ಕೃತಿಯನ್ನು ಬಿಡುಗಡೆಗೊಳಿಸಿದರು.

‘ಈ ಕೃತಿಯನ್ನು ಓದಿದ ಎಲ್ಲರೂ ಹೆಮ್ಮೆ ಪಡುತ್ತಾರೆ ಹಾಗೂ ಮುಂದಿನ ಪೀಳಿಗೆಗೆ ಇದು ಸ್ಫೂರ್ತಿಯಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

ಸಿಆರ್‌ಪಿಎಫ್‌ ಡಿಜಿ ಎ.ಪಿ ಮಹೇಶ್ವರಿ ಅವರು, ‘ಸಿಆರ್‌ಪಿಎಫ್‌ ವೀರಯೋಧರ ಜೀವನಚರಿತ್ರೆಯನ್ನೊಳಗೊಂಡ ಸರಣಿ ಕೃತಿಗಳನ್ನು ಪ್ರಕಟಿಸುವ ಯೋಜನೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಸರಣಿಯ ಮೊದಲ ಕೃತಿಯಲ್ಲಿ ಸಿಆರ್‌ಪಿಎಫ್‌ನ ಧೈರ್ಯಶಾಲಿ 13 ಯೋಧರ ಜೀವನಕತೆಯನ್ನೊಳಗೊಂಡಿದೆ. ‘ಈ ಕೃತಿಯಲ್ಲಿನ ಎಲ್ಲಾ ಯೋಧರು ತಮ್ಮ ಕರ್ತವ್ಯವನ್ನು ಕೆಚ್ಚೆದೆ, ಅಗಾಧ ಧೈರ್ಯ ಹಾಗೂ ಬದ್ಧತೆಯಿಂದ ನಿರ್ವಹಿಸಿದ್ದರು’ ಎಂದು ಮಹೇಶ್ವರಿ ಹೇಳಿದ್ದಾರೆ.

Comments are closed.