ರಾಷ್ಟ್ರೀಯ

ರೈತರ ಪ್ರತಿಭಟನೆಯ ಲಾಭವನ್ನು ತುಕ್ಡೆ ತುಕ್ಡೆ ಗ್ಯಾಂಗ್ ಪಡೆದುಕೊಳ್ಳುತ್ತಿದೆ: ಕೇಂದ್ರ ಸಚಿವ ರವಿಶಂಕರ್‌

Pinterest LinkedIn Tumblr


ಪಾಟ್ನಾ: ನೂತನ ಕೃಷಿ ಕಾಯ್ದೆಗಳ ವಿರೋಧಿಸಿ ರೈತ ಚಳುವಳಿಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ರಾಷ್ಟ್ರ ಒಡೆಯುವ ‘ತುಕ್ಡೆ ತುಕ್ಡೆ ಗ್ಯಾಂಗ್’ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಪಾಟ್ನಾ ಜಿಲ್ಲೆಯ ಬಖ್ತಿಯಾರ್ ಪುರ ವಿಧಾನಸಭಾ ಕ್ಷೇತ್ರದ ತೆಕ್ಬಿಗಾ ಗ್ರಾಮದಲ್ಲಿ ನಡೆದ ಮೂರು ಕೃಷಿ ಕಾಯ್ದೆಗಳ ಪರವಾಗಿ ಬಿಹಾರ ಬಿಜೆಪಿ ರಾಜ್ಯವ್ಯಾಪಿ ‘ಕಿಸಾನ್ ಚೌಪಲ್ ಸಮ್ಮೇಳನ’ (ರೈತ ಸಮಾವೇಶ) ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾಗಿರುವ ರವಿ ಶಂಕರ್‌ ಪ್ರಸಾದ್ ಅವರು ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ಅವರು ಮಾತನಾಡುತ್ತ ‘ಅವರು (ಕೃಷಿ ಕಾನೂನುಗಳನ್ನು ಪ್ರತಿಭಟಿಸುವವರು) ಈ ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೆ ಮತ್ತು ಅದನ್ನು ಹಿಂಪಡೆಯುವವರೆಗೆ ತಮ್ಮ ಚಳುವಳಿಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರೆ. ನರೇಂದ್ರ ಮೋದಿ ಸರ್ಕಾರ ರೈತರನ್ನು ಗೌರವಿಸುತ್ತದೆ ಎಂದು ಹೇಳಲು ನಾವು ಬಯಸುತ್ತೇವೆ, ಆದರೆ ರೈತರ ಚಳುವಳಿಯ ಲಾಭ ಪಡೆಯುವ ‘ತುಕ್ಡೆ ತುಕ್ಡೆ ಗ್ಯಾಂಗ್’ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಹೇಳಿದರು.ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸುತ್ತ ‘ದೇಶವನ್ನು ಒಡೆಯುವ ಭಾಷೆ ಮಾತನಾಡುವ ವರು ಯಾರು ಎಂದು ನಾನು ಕೇಳಬಯಸುತ್ತೇನೆ… ಈಗ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಗಲಭೆ ಯಲ್ಲಿ ತೊಡಗಿರುವ ಬುದ್ಧಿಜೀವಿಗಳನ್ನು ಬಿಡುಗಡೆ ಮಾಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು.

Comments are closed.