ರಾಷ್ಟ್ರೀಯ

ಕೊರೋನಾ ಲಸಿಕೆ ಮುನ್ನ, ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ಕೇಂದ್ರ

Pinterest LinkedIn Tumblr


ನವದೆಹಲಿ: ಕೊರೊನಾವೈರಸ್ ಲಸಿಕೆಯನ್ನು ಭಾರತ ಶೀಘ್ರವೇ ಆರಂಭಿಸಲಿದೆ ಎಂಬ ಮಾತುಗಳ ನಡುವೆ, ಕೇಂದ್ರ ಸರ್ಕಾರ ಶನಿವಾರ (ಡಿಸೆಂಬರ್ 12) ಲಸಿಕೆ ಯನ್ನು ವಿತರಿಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಪ್ರಕಾರ, ಲಾಜಿಸ್ಟಿಕ್ಸ್ ಆಧರಿಸಿ ಪ್ರತಿ ‘ಸೆಷನ್’ಗೆನಲ್ಲಿ 200 ಜನರಿಗೆ ಕರೋನ ಲಸಿಕೆಯನ್ನು ನೀಡಬಹುದು ಅಂತ ತಿಳಿಸಿದೆ. ಇದೇ ವೇಳೆ ಲಸಿಕೆ ಹಾಕಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ಹೇಳಿದೆ. ‘ಲಸಿಕೆ ಯ ಪ್ರಕ್ರಿಯೆಯು ಚುನಾವಣಾ ಪ್ರಕ್ರಿಯೆಯಂತೆಯೇ () ಇರುತ್ತದೆ’ ಎಂದು ಆರೋಗ್ಯ ಸಚಿವಾಲಯ ವು ‘COVID-19 ಲಸಿಕೆಗಳ ಕಾರ್ಯಾಚರಣೆ ಮಾರ್ಗದರ್ಶಿ ಸೂತ್ರಗಳು’ ಎನ್ನುವ ದಾಖಲೆಯಲ್ಲಿ ತಿಳಿಸಿದೆ.

COVID-19 (NEGVAC) ಲಸಿಕೆ ಯ ಬಗ್ಗೆ ರಾಷ್ಟ್ರೀಯ ತಜ್ಞರ ಗುಂಪು . COVID-19 ಲಸಿಕೆಯ ಎಲ್ಲಾ ಆಯಾಮಗಳನ್ನು ಭಾರತದಲ್ಲಿ ಪರಿಚಯಿಸುವ ಬಗ್ಗೆ ರಾಷ್ಟ್ರೀಯ ತಜ್ಞರ ಗುಂಪು ಮಾರ್ಗದರ್ಶನ ನೀಡುತ್ತದ ಎಂದು ಆರೋಗ್ಯ ಸಚಿವಾಲಯ ವು ಗುರುವಾರ ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಂಡಿರುವ ಕರಡು SOP ನಲ್ಲಿ ತಿಳಿಸಿದೆ.ಕೇಂದ್ರ ಸರ್ಕಾರ ಹೇಳುವ ಪ್ರಕಾರ, COVID-19 ನಿಂದ ಉಂಟಾದ ಮಿತಿಗಳಿಂದಾಗಿ ಸುಮಾರು 13-14 ಜನರಿಗೆ ಒಂದು ಗಂಟೆಯಲ್ಲಿ ಲಸಿಕೆ ಯನ್ನು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಲಸಿಕೆ ನೀಡುವ ಉದ್ದೇಶದಿಂದ ಸಮುದಾಯ ಭವನ, ತಾತ್ಕಾಲಿಕ ಟೆಂಟ್ ಗಳನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರತಿ ಲಸಿಕೆ ಯ ಸ್ಥಳದಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಸೇರಿದಂತೆ ಐವರು ಲಸಿಕೆ ಅಧಿಕಾರಿಗಳು ಒಂದು ಲಸಿಕೆಯನ್ನು ವೀಕ್ಷಿಸಲು ಒಬ್ಬರು ಇರುತ್ತಾರೆ ಅಂತ ತಿಳಿಸಿದೆ.

Comments are closed.