ರಾಷ್ಟ್ರೀಯ

ನನ್ನ ಚಪ್ಪಲಿಯನ್ನು ಪೊಲೀಸರು ಕಳ್ಳವುಗೈದಿದ್ದಾರೆ: ಹೋರಾಟ ನಿರತ ರೈತ ಮಹಿಳೆಯ ಆರೋಪ

Pinterest LinkedIn Tumblr


ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ರೈತ ಮಹಿಳೆ ಪೊಲೀಸರ ವಿರುದ್ಧ ವಿಚಿತ್ರ ಆರೋಪ ಮಾಡಿ ನಗೆಪಾಟಲಿಗೆ ಈಡಾಗಿದ್ದಾರೆ.

ನಾನು ಗೀತಾ ಪಾಟೀಲ್​. ಕಿಸಾನ್​ ಏಕ್ತಾ ಸಂಘದ ಮಹಿಳಾ ಮೋರ್ಚಾದ ರಾಷ್ಟ್ರೀ ಅಧ್ಯಕ್ಷೆ. ಪೊಲೀಸರು ಮತ್ತು ಸರ್ಕಾರ ಸೇರಿಕೊಂಡು ನನ್ನ ಚಪ್ಪಲಿ ಕದ್ದಿದೆ. ನಾನು ಹೋರಾಟವನ್ನು ಮುಂದುವರಿಸಬಾರದೆಂದು ಹೀಗೆ ಮಾಡಿದ್ದಾರೆ. ಆದರೆ ನಾನು ಇದಕ್ಕೆಲ್ಲ ಬಗ್ಗುವುದಿಲ್ಲ. ನಾನು ನನ್ನ ಹೋರಾಟವನ್ನು ಬರಿಗಾಲಿನಲ್ಲೇ ಮುಂದುವರಿಸುತ್ತೇನೆ ಎಂದು ಗೀತಾ ಹೆಸರಿನ ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ. ಈಕೆ ಈ ರೀತಿ ಹೇಳುವಾಗ ಪಕ್ಕದಲ್ಲೇ ಕುಳಿತಿದ್ದ ವೃದ್ಧ ರೈತ ಜೋರಾಗಿ ನಕ್ಕಿದ್ದಾರೆ. ಅದರೆ ಅಲ್ಲೇ ಇದ್ದ ಮತ್ತೊಬ್ಬರು ನಗಬೇಡಿ ಎಂದು ಸಮ್ಮನಾಗಿಸಿದ್ದಾರೆ.

ಗೀತಾ ಅವರ ಈ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ. ಗೀತಾ ಸ್ಯಾಂಡಲ್​ ಸ್ಕ್ಯಾಮ್​, ಚಪ್ಪಲಿ ಕಳುವಿನ ಪ್ರಕರಣ ಸಿಐಡಿ ತನಿಖೆ ಆಗಬೇಕು, ಇದಕ್ಕೆಲ್ಲ ಸರ್ಕಾರವೇ ಕಾರಣ, ಮೋದಿ ಮತ್ತು ಅಮಿತ್​ ಷಾ ರಾಜೀನಾಮೆ ನೀಡಬೇಕು ಎಂದು ಟ್ರೋಲ್​ ಮಾಡಲಾಗುತ್ತಿದೆ.

Comments are closed.