ರಾಷ್ಟ್ರೀಯ

ಹಳೆಯ ಕೃಷಿ ಕಾಯ್ದೆಗಳಿಂದ ಹೊಸ ಶತಮಾನ ಸೃಷ್ಟಿಸಲಾಗದು: ಮೋದಿ

Pinterest LinkedIn Tumblr


ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಕಳೆದ 11 ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಈ ಕಾಯ್ದೆಯನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಆಗ್ರಾ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ. ಹಿಂದಿನ ಶತಮಾನದ ಕಾಯ್ದೆಗಳನ್ನು ಆಧರಿಸಿ ಹೊಸ ಶತಮಾನ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹಿಂದಿನ ಶತಮಾನದಲ್ಲಿ ಉಪಯುಕ್ತವಾಗಿದ್ದ ಕಾಯ್ದೆ ಮುಂದಿನ ಶತಮಾನಕ್ಕೆ ಹೊರೆಯಾಗಬಹುದು. ಆದ್ದರಿಂದ ಸುಧಾರಣೆಯ ಪ್ರಕ್ರಿಯೆ ಮುಂದುವರಿಯಬೇಕು ಎಂದಿದ್ದಾರೆ.

ನಮ್ಮ ಸರ್ಕಾರ ಸಮಗ್ರ ಸುಧಾರಣೆಗಳನ್ನು’ ತರುತ್ತಿದೆ. ಈ ಮೊದಲು, ಸುಧಾರಣೆಗಳು ಕೆಲವು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದವು ಅಥವಾ ಕೆಲವು ವಲಯಗಳು ಮತ್ತು ಇಲಾಖೆಗಳನ್ನು ಗಮನದಲ್ಲಿರಿಸಿಕೊಂಡು ತರಲಾಗಿತ್ತು ಎಂದು ಪ್ರಧಾನಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಸರ್ಕಾರ ಕೈಗೊಂಡ ಸುಧಾರಣೆಗಳು ದೇಶದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ ಎಂದು ಅವರು, ಜನರು “ಉತ್ತಮವಾದ ವಿವರಗಳ” ಮೂಲಕ ಹೋದಾಗ ತೃಪ್ತರಾಗುತ್ತಾರೆ ಎಂದರು.

Comments are closed.