ರಾಷ್ಟ್ರೀಯ

ವಿವಾಹಕ್ಕೆ 3 ದಿನಕ್ಕೆ ಮುಂಚೆ ಯುವಕನ ಮರ್ಮಾಂಗ ಕತ್ತರಿಸಿದ ಸ್ನೇಹಿತರು!

Pinterest LinkedIn Tumblr


ಲಕ್ನೋ: ಮದುವೆಗೆ ಮೂರು ದಿನವಿರುವಾಗಲೇ ಯುವಕನ ಮರ್ಮಾಂಗ ಕತ್ತರಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಕೊಟ್ಟಾಲಿ ನಗರದ ಇದಗ್ ಪ್ರದೇಶದಲ್ಲಿ ನಡೆದಿದೆ.

ಸಮೀರ್ ಹಲ್ಲೆಗೊಳಗಾದ ಯುವಕ. ಸಮೀರ್ ಮದುವೆಗೆ ಮೂರು ದಿನಗಳ ಬಾಕಿ ಇತ್ತು. ಫರ್ವೇಜ್ ಎಂಬಾತನ ಬಳಿ ಸಮೀರ್ ಒಂದು ಲಕ್ಷ ರೂ. ಸಾಲ ಪಡೆದುಕೊಂಡಿದ್ದನು. ಅದೇ ವಿಚಾರವಾಗಿ ಇಬ್ಬರ ಮಧ್ಯೆ ಹಲವು ಬಾರಿ ಜಗಳ ನಡೆದಿತ್ತು. ಹಣಕಾಸಿನ ಸಂಬಂಧ ಸಮೀರ್ ಮತ್ತು ಫರ್ವೇಜ್ ನಡುವೆ ದ್ವೇಷದ ಜ್ವಾಲೆ ಹೊತ್ತಿಕೊಂಡಿತ್ತು.

ಹಣ ಕೊಡದ ಹಿನ್ನೆಲೆ ಕೋಪಗೊಂಡಿದ್ದ ಸಮೀರ್ ತನ್ನಿಬ್ಬರು ಗೆಳೆಯರನ್ನ ಸಮೀರ್ ಬಳಿ ಕಳುಹಿಸಿದ್ದಾರೆ. ಇಬ್ಬರು ಉಪಾಯವಾಗಿ ಸಮೀರ್ ನನ್ನು ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶಕ್ಕೆ ಕರೆ ತಂದಿದ್ದಾರೆ. ಈ ವೇಳೆ ಮೂವರು ಸಮೀರ್ ಮರ್ಮಾಂಗ ಕತ್ತರಿಸಿ ಎಸ್ಕೇಪ್ ಆಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಮೀರ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸಮೀರ್ ಧ್ವನಿ ಕೇಳಿದ್ದ ದಾರಿಹೋಕರು ಆತನನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಮೀರ್ ಸ್ಥಿತಿ ಗಂಭೀರವಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

Comments are closed.