ರಾಷ್ಟ್ರೀಯ

ಅನುಮಾನಾಸ್ಪದವಾಗಿ ಧರ್ಮಗುರು ಶವ ಪತ್ತೆ

Pinterest LinkedIn Tumblr


ಭೋಪಾಲ್: 22 ವರ್ಷದ ಧರ್ಮಗುರುವಿನ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಮಧ್ಯ ಪ್ರದೇಶದ ಉಜೈನ್ ನಗರದ ನಾಗಾದದಲ್ಲಿ ನಡೆದಿದೆ. ಇಂದು (ರವಿವಾರ) ಬೆಳಗ್ಗೆ ಧರ್ಮಗುರುವಿನ ಶವ ಮನೆಯ ಮುಂಭಾಗ ಪತ್ತೆಯಾಗಿದೆ.

ಬೊಹ್ರಾ ಸಮಾಜದ 22 ವರ್ಷದ ಮುರ್ತುಜಾ ಮೃತ ಧರ್ಮಗುರು. ಮುರ್ತುಜಾ ಮೂಲತಃ ಖಂಡ್ವಾ ನಿವಾಸಿಯಾಗಿದ್ದು, ಕಳೆದ ಒಂದು ವರ್ಷದಿಂದ ನಾಗಾದದಲ್ಲಿ ವಾಸವಾಗಿ ತಮ್ಮ ಸಮಾಜದ ಮಕ್ಕಳಿಗೆ ಧರ್ಮದ ಕುರಿತು ಶಿಕ್ಷಣ ನೀಡುವ ಕೆಲಸ ಮಾಡಿಕೊಂಡಿದ್ದರು.

ಮಿರ್ಚಿ ಬಜಾರ್ ನಲ್ಲಿಯ ಜಾಬೀರ್ ಎಂಬವರ ಮನೆ ಬಾಡಿಗೆ ಪಡೆದುಕೊಂಡಿದ್ದ ಮುರ್ತುಜಾ ಒಬ್ಬರೇ ವಾಸವಾಗಿದ್ದರು. ಇಂದು ಬೆಳಗ್ಗೆ ಮನೆ ಕೆಲಸದಾಕೆ ಬಂದಾಗ ಮೆಟ್ಟಿಲ ಬಳಿ ಮುರ್ತುಜಾ ಶವ ಕಂಡಿದೆ. ಕೂಡಲೇ ಭಯಗೊಂಡ ಮಹಿಳೆ ಸ್ಥಳೀಯರಿಗೆ ವಿಷಯ ತಿಳಿಸಿದ್ದಾಳೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಕುಟುಂಬಸ್ಥರಿಗೆ ವಿಷಯ ತಲುಪಿಸಿದ್ದಾರೆ. ಮೆಟ್ಟಿಲಿನಿಂದ ಕೆಳಗೆ ಇಳಿಯುವಾಗ ಆಯಕತಪ್ಪಿ ಬಿದ್ದಿದ್ದರಿಂದ ತಲೆ ಭಾಗದಲ್ಲಿ ಪೆಟ್ಟು ಆಗಿದೆ. ತಲೆ ಭಾಗದಲ್ಲಾದ ಗಾಯದಿಂದ ತೀವ್ರ ರಕ್ತಸ್ರಾವವಾದ ಹಿನ್ನೆಲೆ ಧರ್ಮಗುರು ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Comments are closed.