ರಾಷ್ಟ್ರೀಯ

ದೇಶದಲ್ಲಿ ಫೆಬ್ರುವರಿವರೆಗೆ ಕೊರೋನಾ ಲಸಿಕೆ ಸಿಗುವ ಸಾಧ್ಯತೆ: ಬೆಲೆ ಎಷ್ಟು ಇರಲಿದೆ?

Pinterest LinkedIn Tumblr


ನವದೆಹಲಿ: ಭಾರತದಲ್ಲಿ ಕರೋನಾ ಸೋಂಕು ಮತ್ತೆ ತನ್ನ ಕಾಲುಗಳನ್ನು ಚಾಚಲು ಪ್ರಾರಂಭಿಸಿದೆ, ಈ ಮಧ್ಯೆ ಹಲವಾರು ಲಸಿಕೆ ತಯಾರಕ ಕಂಪನಿಗಳು ಪರೀಕ್ಷೆಯ ಅಂತಿಮ ಹಂತದಲ್ಲಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಫೆಬ್ರವರಿ ಆರಂಭದಲ್ಲಿ ಭಾರತದಲ್ಲಿ ಲಸಿಕೆ ಲಭ್ಯವಾಗಲಿದೆ. ಲಸಿಕೆಯಾ ಸಂಗ್ರಹದಿಂದ ವಿತರಣೆಯವರೆಗೆ ನಾವು ಯೋಜನೆಯನ್ನು ರೂಪಿಸುತ್ತಿದ್ದೇವೆ ಎಂದು ಪ್ರಧಾನಿ ಇತ್ತೀಚೆಗೆ ಹೇಳಿದ್ದಾರೆ.

ಫೆಬ್ರವರಿಯೊಳಗೆ ಲಸಿಕೆ ಬಂದರೆ, ಮೊದಲು ಕರೋನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಗುತ್ತದೆ. ಇದರಲ್ಲಿ ವೈದ್ಯರು, ದಾದಿಯರು ಮತ್ತು ಪುರಸಭೆಯ ನೌಕರರು ಸೇರಿದ್ದಾರೆ. ಒಂದು ವೇಳೆ ಬ್ರಿಟನ್ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ಬಳಕೆಗೆ ಅನುಮೋದನೆ ನೀಡಿದರೆ, ಭಾರತದಲ್ಲಿಯೂ ಕೂಡ ತುರ್ತು ಬಳಕೆಗಾಗಿ ಆ ಲಸಿಕೆಗೆ ಅನುಮೋದನೆ ನೀಡಲು ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಯೋಜನೆ ರೂಪಿಸುತ್ತಿದೆ.

ಲಸಿಕೆಯ ತುರ್ತು ಉಪಯೋಗಕ್ಕಾಗಿ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅನುಮೋದನೆ ಪಡೆಯುವ ಆವಶ್ಯಕತೆ ಇದೆ. ಡಿಸೆಂಬರ್ ನಲ್ಲಿಯೇ ಕಂಪನಿ ಅನುಮೋದನೆಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಕೂಡ ವ್ಯಾಕ್ಸಿನ್ ಗಳ ಖರೀದಿಗಾಗಿ ವ್ಯಾಕ್ಸಿನ್ ತಯಾರಿಸುವ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ತನ್ನ ಸಿದ್ಧತೆಗಳನ್ನು ಅಂತಿಮಗೊಳಿಸುತ್ತಿದೆ. ಸರ್ಕಾರದ ಅಧಿಕೃತ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಸರ್ಕಾರ ಸರಿಯಾದ ಮೌಲ್ಯವನ್ನು ನೀಡಿ ಈ ಕಂಪನಿಗಳಿಗೆ ಸಗಟು ರೂಪದಲ್ಲಿ ಲಸಿಕೆ ಖರೀದಿಗಾಗಿ ಮಾತುಕತೆ ನಡೆಸಿದೆ. ರೂ.500-ರೂ.600 MRP ಹೊಂದಿರುವ ಒಂದು ಡೋಸ್ ಲಸಿಕೆಯನ್ನು ಅದೇ ಬೆಲೆಗೆ ಎರಡು ಡೋಸ್ ಖರೀದಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.

ವಿಷಯಕ್ಕೆ ಸಂಬಂಧಿಸಿದ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಎಲ್ಲವು ಯೋಜನೆಯ ಅನುಗುಣವಾಗಿ ನಡೆದರೆ, ಜನವರಿ-ಫೆಬ್ರುವರಿ ಹೊತ್ತಿಗೆ ಭಾರತದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

Comments are closed.